ಕರ್ನಾಟಕ

karnataka

ETV Bharat / sitara

ಹೌದು ಸ್ವಾಮಿ,, ಈ ಬಾರಿ ಕನ್ನಡದ ಬಿಗ್ ಬಾಸ್​ ನಡೆಯುವುದು​ ಡೌಟ್​​​​.. - ಕನ್ನಡದ ಬಿಗ್​ ಬಾಸ್​​

ನೂರು ದಿನಗಳ ಕಾಲ ನಡೆಯುವ ಬಿಗ್ ಬಾಸ್ ಪ್ರಕ್ರಿಯೆ ಈಗಾಗಲೇ ಆರಂಭವಾಗಬೇಕಿತ್ತು. ಆದರೆ, ಈ ಸೀಸನ್‌ ನಡೆಯೋ ಯಾವುದೇ ಮುನ್ಸೂಚನೆ ಕಂಡು ಬಂದಿಲ್ಲ. ಜೊತೆಗೆ ಬಿಗ್ ಬಾಸ್ ನಡೆಸಿಕೊಡುವ ಸುದೀಪ್ ಕೂಡ ಡಿಸೆಂಬರ್​​ನಲ್ಲಿ ಸಿನಿಮಾಗಾಗಿ ದಿನಾಂಕಗಳನ್ನು ನೀಡಿದ್ದಾರೆ ಎನ್ನಲಾಗಿದೆ..

this time Kannada Bigg Boss Doubt
ಈ ಬಾರಿ ಕನ್ನಡದ ಬಿಗ್ ಬಾಸ್​ ನಡೆಯುವುದು​ ಡೌಟ್​​​​

By

Published : Sep 9, 2020, 6:43 PM IST

Updated : Sep 9, 2020, 6:57 PM IST

ಅಕ್ಟೋಬರ್​​ನಲ್ಲಿ ಆರಂಭವಾಗಬೇಕಿದ್ದ ಕನ್ನಡ ಬಿಗ್ ಬಾಸ್​​ನ 8ನೇ ಆವೃತ್ತಿಗೆ ಈಗಾಗಲೇ ಸಿದ್ಧತೆ ಆರಂಭವಾಗಬೇಕಿತ್ತು. ಆದರೆ, ಯಾವುದೇ ಚಟುವಟಿಕೆಗಳು ನಡೆಯದೆ ಇರುವುದರಿಂದ ಈ ವರ್ಷ ಬಿಗ್ ಬಾಸ್ ನಡೆಯುವುದು ಖಚಿತವಾಗಿಲ್ಲ.

ಕಿಚ್ಚ ಸುದೀಪ್ ನಡೆಸಿಕೊಡುವ ಈ ರಿಯಾಲಿಟಿ ಶೋ ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಲಿತ್ತು. ಕೋವಿಡ್-19 ಕಡಿಮೆ ಆದ ಬಳಿಕ ಮಾರ್ಚ್ 2021ನಲ್ಲಿ ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊರೊನಾದಿಂದಾಗಿ ಇಷ್ಟು ದಿನ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್‌ಗೆ ಬ್ರೇಕ್‌ ಬಿದ್ದಿತ್ತು.

ಆದ್ರೀಗ ಶೂಟಿಂಗ್‌ಗೆ ಅನುಮತಿ ದೊರೆತಿದ್ದು, ಕೆಲವು ಸೀರಿಯಲ್‌ ಮತ್ತು ರಿಯಾಲಿಟಿ ಶೋಗಳು ಶೂಟಿಂಗ್‌ ಶುರು ಮಾಡಿದ್ರೆ, ಇನ್ನು ಕೆಲ ಧಾರಾವಾಹಿಗಳು ನಿಂತು ಹೋಗಿವೆ.

ಸುದೀಪ್​​

ನೂರು ದಿನಗಳ ಕಾಲ ನಡೆಯುವ ಬಿಗ್ ಬಾಸ್ ಪ್ರಕ್ರಿಯೆ ಈಗಾಗಲೇ ಆರಂಭವಾಗಬೇಕಿತ್ತು. ಆದರೆ, ಈ ಸೀಸನ್‌ ನಡೆಯೋ ಯಾವುದೇ ಮುನ್ಸೂಚನೆ ಕಂಡು ಬಂದಿಲ್ಲ. ಜೊತೆಗೆ ಬಿಗ್ ಬಾಸ್ ನಡೆಸಿಕೊಡುವ ಸುದೀಪ್ ಕೂಡ ಡಿಸೆಂಬರ್​​ನಲ್ಲಿ ಸಿನಿಮಾಗಾಗಿ ದಿನಾಂಕಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಹೀಗಿರುವಾಗ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಕೂಡ ಈ ವರ್ಷ ಪ್ರಸಾರವಾಗುವುದಿಲ್ಲ ಅನ್ನೋ ಸುದ್ದಿ ಇದೀಗ ಹೊರ ಬಿದ್ದಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್‌ಬಾಸ್‌ ಶುರುವಾಗಿದ್ದು, ಹಿಂದಿಯಲ್ಲಿ ಬಿಗ್‌ಬಾಸ್‌ ಅಕ್ಟೋಬರ್‌ನಿಂದ ಆರಂಭವಾಗಲಿದೆ.

Last Updated : Sep 9, 2020, 6:57 PM IST

ABOUT THE AUTHOR

...view details