ಕರ್ನಾಟಕ

karnataka

ETV Bharat / sitara

ಡಾ. ವಿಷ್ಣುವರ್ಧನ್​ ಹುಟ್ಟುಹಬ್ಬಕ್ಕಿವೆ ಎರಡು ವಿಶೇಷತೆಗಳು! ಅವುಗಳೆಂದರೆ..

ಸೆ.18 ರಂದು ದಿವಂಗತ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ. ಈ ಬಾರಿ ಅವರ ಜನುಮದಿನ ವಿಶೇಷವಾಗಿರಲಿದ್ದು, ಅಭಿಮಾನಿಗಳು ನೀಡುವ 'ಡಾ. ವಿಷ್ಣುವರ್ಧನ ರಾಷ್ಟ್ರ ಪ್ರಶಸ್ತಿ'ಗೆ ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ. ಅಲ್ಲದೇ ವಿಷ್ಣು ಪುತ್ಥಳಿಯನ್ನು ಗಡಿಜಿಲ್ಲೆ ಕೋಲಾರದಲ್ಲಿ ಸ್ಥಾಪಿಸಲಾಗುತ್ತಿದೆ.

Dr. Vishnuvardhan

By

Published : Sep 7, 2019, 12:11 PM IST

ಸೆಪ್ಟೆಂಬರ್​ ತಿಂಗಳು ಕನ್ನಡ ಚಿತ್ರರಂಗಕ್ಕೆ ವಿಶೇಷ. ಯಾಕಂದ್ರೆ ಇದೇ ತಿಂಗಳಲ್ಲಿ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್​ ಸೇರಿದಂತೆ ಸಾಲು ಸಾಲು ನಟ, ನಟಿಯರ ಹುಟ್ಟುಹಬ್ಬವಿದೆ.

ಸೆ.18 ರಂದು ವಿಷ್ಣುವರ್ಧನ್ ಅವರ ಹುಟ್ದಬ್ಬ. ಈ ಬಾರಿ ಅವರ ಜನುಮದಿನ ವಿಶೇಷವಾಗಿರಲಿದ್ದು, ಅವರ ಅಭಿಮಾನಿಗಳು ನೀಡುವ 'ಡಾ. ವಿಷ್ಣುವರ್ಧನ ರಾಷ್ಟ್ರ ಪ್ರಶಸ್ತಿ'ಗೆ ರಮೇಶ್ ಅರವಿಂದ್ ಅವರನ್ನು ಸೆಲೆಕ್ಟ್‌ ಮಾಡಲಾಗಿದೆ. ಅಲ್ಲದೇ ವಿಷ್ಣು ಅವರ ಪುತ್ಥಳಿಯನ್ನು ಕೋಲಾರದಲ್ಲಿ ಸ್ಥಾಪಿಸಲಾಗುತ್ತಿದೆ.

ರಮೇಶ್ ಅರವಿಂದ್​

ಕಳೆದ ಶುಕ್ರವಾರ ವಿಷ್ಣು ಅಭಿಮಾನಿ ಆರ್ ಬಿ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ವಿಷ್ಣು ಸರ್ಕಲ್’ ಸಿನಿಮಾ ಬಿಡುಗಡೆ ಆಗಿದೆ. ನಿರ್ಮಾಪಕ, ನಟ, ನಿರ್ದೇಶಕ, ಶಾಸಕರಾದ ಬಿ. ಸಿ. ಪಾಟೀಲ್ ಅಭಿನಯದಲ್ಲಿ 26 ವರ್ಷಗಳ ಹಿಂದೆ ಬಿಡುಗಡೆಯಾಗಿ ಖ್ಯಾತಿ ಪಡೆದಿದ್ದ 'ನಿಷ್ಕರ್ಷ' ಸಿನಿಮಾವನ್ನು ಆಧುನಿಕ ತಂತ್ರಜ್ಞಾನ ಬಳಸಿ ಮತ್ತೆ ತಯಾರಿಸಿದ್ದು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಮರು ಬಿಡುಗಡೆ ಮಾಡಲಿದ್ದಾರೆ.

ಡಾ. ವಿಷ್ಣುವರ್ಧನ್

ಕೋಲಾರ ಜಿಲ್ಲೆಯ ಅಹನ್ಯ ಗ್ರಾಮದಲ್ಲಿ ವಿಷ್ಣು ಅಭಿಮಾನಿಗಳು ಅವರ ಪುತ್ಥಳಿಯನ್ನು ಸೆ.18 ರಂದು ಅನಾವರಣ ಮಾಡಲಿದ್ದಾರೆ. ಡಾ. ವಿಷ್ಣುವರ್ಧನ ಸೇನಾ ಸಮಿತಿ ಅಭಿಮಾನ್ ಸ್ಟುಡಿಯೋ ಬಳಿ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲ್ಲಿದ್ದು, ರಕ್ತ ದಾನ, ಉಚಿತ ಆರೋಗ್ಯ ಶಿಬಿರ, ಅನ್ನದಾನವನ್ನೂ ನಡೆಸಲಿದ್ದಾರೆ.

ಸೆ.10 ರಮೇಶ್ ಅರವಿಂದ್, ಉಪೇಂದ್ರ, ಶ್ರುತಿ ಜನುಮದಿನವನ್ನು ಆಚರಣೆ ಮಾಡಿಕೊಳ್ಳಲಿದ್ದು, ತಮ್ಮ ನೆಚ್ಚಿನ ನಾಯಕ- ನಾಯಕಿಯರ ಹುಟ್ಟುಹಬ್ಬವನ್ನು ಸಂಭ್ರಮಿಸಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ABOUT THE AUTHOR

...view details