ಕರ್ನಾಟಕ

karnataka

ETV Bharat / sitara

ಇವರು ಸ್ಯಾಂಡಲ್​​ವುಡ್​ನ ನಟರೂ ಹೌದು, ನಿರೂಪಕರೂ ಹೌದು! - ಶಿವರಾಜ್​ಕುಮಾರ್​​​

ಕನ್ನಡದ ಈ ನಟರು ಕಿರುತೆರಯ ಕೆಲವು ಕಾರ್ಯಕ್ರಮಳನ್ನು ನಿರೂಪಣೆ ಮಾಡಿ ನಿರೂಪಕರಾಗಿಯೂ ಹೆಸರು ಮಾಡಿದ್ದಾರೆ.

this kannada actors anchors come actors
ಇವರು ಸ್ಯಾಂಡಲ್​​ವುಡ್​ನ ನಟರೂ ಹೌದು, ನಿರೂಪಕರೂ ಹೌದು!

By

Published : Feb 26, 2020, 7:34 PM IST

ಹಿರಿಯ ನಟರು ಕಿರಿತೆರೆಯಲ್ಲಿ ನಟಿಸುವುದು ಮಾಮೂಲಿ ಸಂಗತಿ. ಆದರೆ, ಹಿರಿತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಸ್ಟಾರ್​​​ ನಟ-ನಟಿಯರೂ ಇದೀಗ ನಿರೂಪಕರಾಗಿ ಕಿರುತೆರೆಗೆ ಕಾಲಿಟ್ಟು ಸೈ ಎನಿಸಿಕೊಂಡಿದ್ದಾರೆ. ಆ ಮೂಲಕ ಕೇವಲ ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲೂ ಕಮಾಲ್ ಮಾಡಿದ್ದಾರೆ.

ರಮೇಶ್​​ ಅರವಿಂದ್​​
ಕಿಚ್ಚ ಸುದೀಪ್ :ಅಭಿನಯ ಚಕ್ರವರ್ತಿ ಎಂದೇ ಬಿರುದಾಂಕಿತ ಕಿಚ್ಚ ಸುದೀಪ್ ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಮೂಲಕ ವೀಕ್ಷಕರಿಗೆ ಮಗದಷ್ಟು ಹತ್ತಿರವಾಗಿದ್ದಾರೆ. ಕಳೆದ ಏಳು ಸೀಸನ್​​ಗಳನ್ನು ಯಶಸ್ವಿಯಾಗಿ ನಿರೂಪಿಸಿರುವ ಸುದೀಪ್​​ ಕಿರುತೆರೆಯಲ್ಲೂ ಮಿಂಚಿದ್ದಾರೆ.
ಸುದೀಪ್​​

ಶಿವರಾಜ್ ಕುಮಾರ್:ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡಾ ನಿರೂಪಕರಾಗಿ ಮನೆ ಮಾತಾಗಿದ್ದರು. ಯಾರೀ ನಂ 1 ಕಾರ್ಯಕ್ರಮದ ನಿರೂಪಕರಾಗಿ ಮೊದಲ ಬಾರಿಗೆ ಕಿರುತೆರೆ ಲೋಕಕ್ಕೆ ಕಾಲಿಟ್ಟ ಶಿವಣ್ಣ ಅಲ್ಲೂ ಸೈ ಎನಿಸಿಕೊಂಡಿದ್ದಾರೆ.

ಪುನೀತ್​​ ರಾಜ್​ಕುಮಾರ್​​

ರಮೇಶ್ ಅರವಿಂದ್ :ರಮೇಶ್ ಅರವಿಂದ್ ಅವರಿಂದು ಜನಪ್ರಿಯತೆಯ ಶಿಖರಲ್ಲಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಕಿರುತೆರೆ. ಅವರು ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ರಮೇಶ್ ಅವರಿಗೆ ತುಂಬಾ ಜನಪ್ರಿಯತೆ ತಂದುಕೊಟ್ಟಿದೆ. ಸಾಧಕರನ್ನು ಪರಿಚಯಿಸುವ ಆ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ನಿರೂಪಣೆ ಅದ್ಭುತವಾಗಿ ಮೂಡಿ ಬರುತ್ತಿತ್ತು.

ಶಿವರಾಜ್​ಕುಮಾರ್​​

ಪುನೀತ್ ರಾಜ್ ಕುಮಾರ್ :ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆ ಜಗತ್ತಿಗೆ ಕಾಲಿಟ್ಟ ಪವರ್ ಸ್ಟಾರ್ ಅಪ್ಪು ನಿರೂಪಣೆಯ ಮೂಲಕ ಸೈ ಎನಿಸಿಕೊಂಡವರು. ಕೇವಲ ಕನ್ನಡದ ಕೋಟ್ಯಧಿಪತಿ ಮಾತ್ರವಲ್ಲದೇ ಫ್ಯಾಮಿಲಿ ಪವರ್ ಕಾರ್ಯಕ್ರಮವನ್ನೂ ಕೂಡಾ ನಡೆಸಿಕೊಟ್ಟಿದ್ದಾರೆ.

ಉಮಾಶ್ರೀ

ಗಣೇಶ್:ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಗಣೇಶ್ ಮುಂದೆ ಚಂದನವನದ ಸ್ಟಾರ್ ನಟರ ಸಾಲಿಗೆ ಸೇರ್ಪಡೆಯಾದ್ರು. ಮುಂದೆ ಸೂಪರ್ ಮಿನಿಟ್ ಗೇಮ್ ಶೋ ಮೂಲಕ ಮತ್ತೆ ಕಿರುತೆರೆಗೆ ಮುಖ ಮಾಡಿದ ಗಣೇಶ್ ಸ್ಯಾಂಡಲ್​ವುಡ್ ಜೊತೆಗೆ ಆ್ಯಂಕರಿಂಗ್​​ನಲ್ಲೂ ಮಿಂಚಿದರು.

ಗಣೇಶ್​​

ಲಕ್ಷ್ಮಿ:ಕಥೆ ಅಲ್ಲ ಜೀವನ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಜ್ಯೂಲಿ ಲಕ್ಷ್ಮಿ ಮುಂದೆ ನಾನಾ ನೀನಾ ಕಾರ್ಯಕ್ರಮವನ್ನೂ ನಡೆಸಿಕೊಟ್ಟು ಸದ್ದು ಮಾಡಿದರು.

ಲಕ್ಷ್ಮಿ

ಉಮಾಶ್ರೀ:ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಪುಟ್ಮಲ್ಲಿಯಾಗಿ ಕಿರುತೆರೆಗೆ ಕಾಲಿಟ್ಟಿರುವ ಉಮಾಶ್ರೀ ಮೊದಲ ಬಾರಿಗೆ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡಾ ಮಕ್ಕಳ ಕಾರ್ಯಕ್ರಮಕ್ಕೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ನಿರೂಪಕಿಯಾಗಿ ಉಮಾಶ್ರೀ ಬ್ಯುಸಿಯಾಗಿದ್ದಾರೆ.

ಪುನೀತ್​​ ರಾಜ್​ಕುಮಾರ್​​

ABOUT THE AUTHOR

...view details