ಮಕ್ಕಳಿಗೆ 2 ವರ್ಷ ತುಂಬುತ್ತಿದ್ದಂತೆ ಪೋಷಕರು ಮಕ್ಕಳಿಗೆ ಅಕ್ಷರ ಹೇಳಿಕೊಡಲು ಆರಂಭಿಸುತ್ತಾರೆ. ಮಕ್ಕಳು ಅಕ್ಷರ ಕಲಿತು ಬರೆಯಬೇಕಾದರೆ ಏನಿಲ್ಲವೆಂದರೂ 4 ವರ್ಷ ತುಂಬಬೇಕು. ಆದರೆ ಇಲ್ಲೊಬ್ಬರು ಸಿನಿಮಾ ನಟಿ ತಮ್ಮ 24ನೇ ವಯಸ್ಸಿನಲ್ಲಿ ಕಾಪಿರೈಟಿಂಗ್ ಬರೆಯುತ್ತಾ ಅಕ್ಷರ ಕಲಿಯುತ್ತಿದ್ದಾರೆ. ಇದೇನಪ್ಪಾ ಸಿನಿಮಾ ಹೀರೋಯಿನ್ ಈಗ ಕಲಿಯುತ್ತಿದ್ದಾರಾ ಎಂದು ಆಶ್ಚರ್ಯವಾಗಬೇಡಿ.
24ನೇ ವಯಸ್ಸಲ್ಲಿ ಅಕ್ಷರ ಕಲಿಯುತ್ತಿರುವ ಈ ನಟಿ ಯಾರು ಗುರುತಿಸಿ - Malyalam actress Anupama parameshwaran
ಕನ್ನಡದ 'ನಟಸಾರ್ವಭೌಮ' ಚಿತ್ರದಲ್ಲಿ ನಟಿಸಿರುವ ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಈಗ ತೆಲುಗು ಅಕ್ಷರ ಕಲಿಯುತ್ತಿದ್ದಾರೆ. ತೆಲುಗು ಕಾಪಿರೈಟಿಂಗ್ ಬರೆಯುತ್ತಿರುವ ಫೋಟೋಗಳನ್ನು ಅನುಪಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೀಗೆ ಅಕ್ಷರ ಕಲಿಯುತ್ತಿರುವುದು ಬೇರೆ ಯಾರೂ ಅಲ್ಲ, ಮಲಯಾಳಂ ನಟಿ ಅನುಪಮಾ ಪರಮೇಶ್ವನ್. ಅನುಪಮಾಗೆ ಓದಲು ಬರೆಯಲು ಬರುವುದಿಲ್ವಾ ಎಂದುಕೊಳ್ಳಬೇಡಿ. ಅನುಪಮಾ ವಿದ್ಯಾವಂತೆ, ಕಾಲೇಜಿನಲ್ಲಿ ಮೇಜರ್ ಇಂಗ್ಲೀಷ್ ಓದಿರುವ ಹುಡುಗಿ. ಆದರೆ ಈಗ ಆಕೆ ಕಲಿಯುತ್ತಿರುವುದು ತೆಲುಗು ಅಕ್ಷರ. ಅನುಪಮಾ ಪರಮೇಶ್ವರನ್ ಮಲಯಾಳಂ ಚಿತ್ರಗಳಿಗಿಂತ ತೆಲುಗು ಚಿತ್ರದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ '18 ಪೇಜಸ್' ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಬಹುಶ: ತಮ್ಮ ತೆಲುಗು ಚಿತ್ರಕ್ಕಾಗಿ ಅನುಪಮಾ ಅಕ್ಷರ ಕಲಿಯುತ್ತಿರಬಹುದು ಎನ್ನಲಾಗಿದೆ. ಕಾಪಿರೈಟ್ ಬರೆಯುತ್ತಿರುವ ಫೋಟೋಗಳನ್ನು ಅನುಪಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು 'ಈ ಪುಸ್ತಕ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಗೋಪಿಯವರೆ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಅನುಪಮಾ, 'ನಟಸಾರ್ವಭೌಮ' ಚಿತ್ರದಲ್ಲಿ ನಟಿಸಿದ್ದಾರೆ.