ಪ್ರತಿ ಸೆಲಿಬ್ರಿಟಿಗೂ ಮರೆಯಲಾರದ ಬಾಲ್ಯದ ನೆನಪುಗಳಿರುತ್ತವೆ. ತಾವು ಬೆಳೆದು ದೊಡ್ಡವರಾದಾಗ ತಮ್ಮ ಬಾಲ್ಯದ ಕೆಲ ಘಟನೆಗಳನ್ನು ನೆನಪಿಸಿಕೊಂಡರೆ ಅಥವಾ ಬಾಲ್ಯದ ಫೋಟೋವನ್ನು ನೋಡಿದರೆ ಸಿಗುವ ಆನಂದ ಬೆಲೆ ಕಟ್ಟಲಾಗುವುದಿಲ್ಲ.
ಅಮ್ಮನೊಂದಿಗೆ ಆಡುತ್ತ 'ವಿಜಯ'ನಗೆ ಬೀರಿದ ಈ ಚಿನಕುರುಳಿ ಈಗ ಸ್ಟಾರ್ ಹೀರೋ..! - undefined
ಅಮ್ಮನೊಂದಿಗೆ ಇರುವ ವಿಜಯ್ ದೇವರಕೊಂಡ ಬಾಲ್ಯದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ಫೆವರೇಟ್ ನಟನ ಬಾಲ್ಯದ ಫೋಟೋ ನೋಡಿ ಖುಷಿ ಪಟ್ಟಿದ್ದಾರೆ. ವಿಜಯ್ ದೇವರಕೊಂಡ ಸದ್ಯಕ್ಕೆ 'ಡಿಯರ್ ಕಾಮ್ರೇಡ್' ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ.
![ಅಮ್ಮನೊಂದಿಗೆ ಆಡುತ್ತ 'ವಿಜಯ'ನಗೆ ಬೀರಿದ ಈ ಚಿನಕುರುಳಿ ಈಗ ಸ್ಟಾರ್ ಹೀರೋ..!](https://etvbharatimages.akamaized.net/etvbharat/prod-images/768-512-3706110-thumbnail-3x2-vijaydeva.jpg)
ವಿಜಯ್ ದೇವರಕೊಂಡ
ಈ ಫೋಟೋದಲ್ಲಿ ಅಮ್ಮನ ಸರವನ್ನು ಹಿಡಿದು ಆಡುತ್ತಿರುವ ಮಗು ಈಗ ಸ್ಟಾರ್ ಹೀರೋ. ಈ ನಟ ಬೇರಾರೂ ಅಲ್ಲ, ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ. ಈ ಫೋಟೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ಫೆವರೇಟ್ ನಟನ ಬಾಲ್ಯದ ಫೋಟೋ ನೋಡಿ ಖುಷಿ ಪಟ್ಟಿದ್ದಾರೆ. ಸದ್ಯಕ್ಕೆ ವಿಜಯ್ ದೇವರಕೊಂಡ 'ಡಿಯರ್ ಕಾಮ್ರೇಡ್' ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಭರತ್ ಕಮ್ಮ ನಿರ್ದೇಶನದ ಈ ಸಿನಿಮಾ ಜುಲೈ 26 ರಂದು ಬಿಡುಗಡೆಯಾಗುತ್ತಿದೆ. ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸಿದ್ದಾರೆ.
Last Updated : Jun 30, 2019, 4:48 PM IST