ಶ್ರುತಿ ನಾಯ್ಡು ನಿರ್ದೇಶನದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಾಯಕ ರಾಕ್ ಸ್ಟಾರ್ ಅರುಣ್ ಪಿಎ ನಿಶಾ ಆಗಿ ನಟಿಸುತ್ತಿರುವ ಚೆಲುವೆ ಹೆಸರು ನಿಶಾ ಶಶಿಧರ್. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಧಾರಾವಾಹಿಯಲ್ಲಿ ನಾಯಕಿ ಕಾವೇರಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಬಾರಿ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಬಂದಾಗ ಕೇವಲ 8 ವರ್ಷ ವಯಸ್ಸು.
ನಿಶಾ ಚಿಕ್ಕ ವಯಸ್ಸಿನಲ್ಲೇ ಸಿನಿಮಾದಲ್ಲಿ ಅಭಿನಯಿಸಿದ್ದರು. ಮೋಹಕ ತಾರೆ ರಮ್ಯಾ ಅಭಿನಯದ 'ತನನಂ ತನನಂ' ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕುವ ಅವಕಾಶ ದೊರೆತಾಗ ಆಕೆಗಾದ ಸಂತಸ ಅಷ್ಟಿಷ್ಟಲ್ಲ. ಮೂರನೇ ತರಗತಿಯಲ್ಲಿ ಕಲಿಸುತ್ತಿದ್ದ ಚಿಕ್ಕಮಗಳೂರಿನ ಚೆಲುವೆ ನಿಶಾಗೆ ರಮ್ಯಾ ಜೊತೆ ತೆರೆ ಹಂಚಿಕೊಂಡಿದ್ದು ತುಂಬಾ ಖುಷಿ ನೀಡಿತ್ತು. ಫ್ಯಾಷನ್ ಡಿಸೈನಿಂಗ್ನಲ್ಲಿ ಕೋರ್ಸ್ ಮಾಡುತ್ತಿದ್ದ ನಿಶಾ ಸಹಜವಾಗಿ ಮಾಡೆಲಿಂಗ್ನತ್ತ ಆಕರ್ಷಿತರಾದರು. ಓದಿನ ಜೊತೆಗೆ ಮಾಡೆಲಿಂಗ್ ಕೂಡಾ ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದ ನಿಶಾ ಒಂದಷ್ಟು ಶೋಗಳಲ್ಲಿ ಭಾಗವಹಿಸಿದ್ದರು. 'ಮಿಸ್ ಮೈಸೂರು 2018' ಪ್ರಶಸ್ತಿ ಮುಡಿಗೇರಿಸಿಕೊಂಡ ಈಕೆ ಮುಂದೆ ಅದರಲ್ಲೇ ಬದುಕು ರೂಪಿಸಿಕೊಳ್ಳುವ ಕನಸು ಕಂಡರು.