ಕರ್ನಾಟಕ

karnataka

ETV Bharat / sitara

ಎರಡು ಬಾಳೆ ಹಣ್ಣು ಬೆಲೆ ಕಂಡು ಬೆಚ್ಚಿದ ಬಾಲಿವುಡ್ ನಟ - ನಟ

ಕೇವಲ ಎರಡು ಬಾಳೆ ಹಣ್ಣಿಗೆ ಬರೋಬ್ಬರಿ ₹ 442.50 ಬಿಲ್ ನೋಡಿ ಬಾಲಿವುಡ್​ ನಟ-ನಿರ್ದೇಶಕ ರಾಹುಲ್​ ದಂಗಾಗಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Jul 24, 2019, 11:03 AM IST

ಅಬ್ಬಬ್ಬಾ ಅಂದ್ರೆ ಒಂದು ಬಾಳೆ ಹಣ್ಣಿನ ಬೆಲೆ ಎಷ್ಟಿರಬಹುದು? ₹ 5 to ₹ 20, ಇಲ್ಲವೇ ₹ 50 ಇರಬಹುದಾ ? ಆದರೆ, ಫೈವ್​ ಸ್ಟಾರ್​ ಹೋಟೆಲ್​​​​ವೊಂದರಲ್ಲಿ ಒಂದು ಬಾಳೆ ಹಣ್ಣಿನ ಬೆಲೆ ಎಷ್ಟು ಅಂತಾ ಕೇಳಿದ್ರೆ ಖಂಡಿತವಾಗಿಯೂ ಶಾಕ್ ಆಗುತ್ತದೆ. ಇಂತಹದೊಂದು ಆಘಾತ ಬಾಲಿವುಡ್​​ ನಟ-ನಿರ್ದೇಶಕ ರಾಹುಲ್ ಬೋಸ್ ಎದುರಿಸಿದ್ದಾರೆ.

ಇತ್ತೀಚಿಗಷ್ಟೆ ಐಷಾರಾಮಿ ಹೊಟೇಲ್​​ವೊಂದಕ್ಕೆ ರಾಹುಲ್​​, ಅಲ್ಲಿ ಎರಡು ಬಾಳೆ ಹಣ್ಣು ಆರ್ಡರ್​ ಮಾಡಿದ್ದಾರೆ. ಸಿಬ್ಬಂದಿ ತಂದುಕೊಟ್ಟ ಹಣ್ಣು ಸವಿದ ಬಳಿಕ ಅವರಿಗೆ ಅಚ್ಚರಿಯೊಂದು ಎದುರಾಗಿದೆ. ಬಿಲ್ ನೋಡಿದ ಈ ನಟನಿಗೆ ಶಾಕ್ ಆಗಿದೆ. ಕೇವಲ ಎರಡು ಬಾಳೆ ಹಣ್ಣಿಗೆ ಬರೋಬ್ಬರಿ ₹442.50 ಬಿಲ್ ನೋಡಿ ದಂಗಾಗಿದ್ದಾರೆ.

ಥ್ರೀ ಸ್ಟಾರ್​, ಫೈವ್​ ಸ್ಟಾರ್ ಹೊಟೇಲ್​​ಗಳು ತುಂಬಾ ಕಾಸ್ಟ್ಲಿ. ಅಲ್ಲಿ ಎಲ್ಲದರ ಬೆಲೆ ಕೊಂಚ ಜಾಸ್ತಿ ಅಂತಾ ಎಲ್ಲರಿಗೂ ಗೊತ್ತು. ಆದರೆ, ಅದು ಇಷ್ಟು ಹೆಚ್ಚಾಗಿರುತ್ತದೆ ಅಂತಾ ನಂಗೆ ಗೊತ್ತಿರಲಿಲ್ಲ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ABOUT THE AUTHOR

...view details