'ದೆವ್ವಗಳಿದೆ ಎಚ್ಚರಿಕೆ' ಎಂಬ ಟ್ಯಾಗ್ಲೈನ್ ಇಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ 'ಮನೆ ಮಾರಾಟಕ್ಕಿದೆ' ಚಿತ್ರ. ಪೋಸ್ಟರ್ನಿಂದಲೇ ಗಮನ ಸೆಳೆದಿದ್ದ, ಈ ಚಿತ್ರತಂಡ ತಮ್ಮ ಸಿನಿಮಾ ಬಗ್ಗೆ ಹೇಳಿಕೊಳ್ಳಲು ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಹಾಜರಿತ್ತು.
ದೆವ್ವದ ಮನೆ ಮಾರಾಟ ಮಾಡಲು ಬರ್ತಾ ಇದ್ದಾರೆ ಈ ನಾಲ್ವರು..! - undefined
ಕಾಮಿಡಿ ಹಾರರ್ ಕಥೆ ಹೊಂದಿರುವ 'ಮನೆ ಮಾರಾಟಕ್ಕಿದೆ' ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಸಿನಿಮಾದಲ್ಲಿ ಸಾಧುಕೋಕಿಲ, ಚಿಕ್ಕಣ್ಣ, ರವಿಶಂಕರ್ ಗೌಡ ಹಾಗೂ ಕುರಿ ಪ್ರತಾಪ್ ಹಾಗೂ ಶ್ರುತಿ ಹರಿಹರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್ ಗೌಡ ಹಾಗೂ ಕುರಿ ಪ್ರತಾಪ್ ಮುಖ್ಯ ಭೂಮಿಕೆಯಲ್ಲಿರುವ 'ಮನೆ ಮಾರಾಟಕ್ಕಿದೆ' ಸಿನಿಮಾ ಮುಂದಿನ ತಿಂಗಳು ತೆರೆ ಕಾಣುತ್ತಿದೆ. ಈ ಸಿನಿಮಾ ಬಗ್ಗೆ ಮಾತನಾಡಿದ, ಶ್ರಾವಣಿ ಸುಬ್ರಹ್ಮಣ್ಯ ಸಿನಿಮಾ ಖ್ಯಾತಿಯ ಮಂಜು ಸ್ವರಾಜ್, ಹಾಸ್ಯ ನಟರಾದ ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಪ್ರತಾಪ್, ನಿರ್ಮಾಪಕ ಎಸ್.ವಿ. ಬಾಬು ಹಾಗೂ ಚಿತ್ರತಂಡದ ಇತರ ಸದಸ್ಯರು ಈ ಚಿತ್ರದ ವಿಶೇಷತೆ ಬಗ್ಗೆ ಹೇಳಿಕೊಂಡರು.
ಇದೊಂದು ಹಾರರ್ ವಿತ್ ಕಾಮಿಡಿ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ನಾಲ್ಕು ಜನ ಕಾಮಿಡಿ ನಟರ ಮಧ್ಯೆ ಶೃತಿ ಹರಿಹರನ್, ಹಿರಿಯ ನಟಿ ಸುಮಿತ್ರಾ, ಹಿರಿಯ ನಟ ಶಿವರಾಮ್ ಹೀಗೆ ದೊಡ್ಡ ಕಲಾವಿದರ ದಂಡು ಈ ಚಿತ್ರದಲ್ಲಿದೆ. ಚಿತ್ರಕ್ಕೆ ಛಾಯಾಗ್ರಹಕ ಸುರೇಶ್ ಬಾಬು ಅದ್ಭುತ ಕ್ಯಾಮರಾ ಕೈಚಳಕವಿದೆ. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಹಿನ್ನೆಲೆ ಸಂಗೀತ ವಿಭಿನ್ನವಾಗಿದೆಯಂತೆ. ಹನಿಮೂನ್ ಎಕ್ಸ್ಪ್ರೆಸ್, ರಿಕ್ಕಿ, ಪಟಾಕಿ ಸಿನಿಮಾಗಳನ್ನು ನಿರ್ಮಿಸಿದ್ದ ಎಸ್.ವಿ. ಬಾಬು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಮನೆ ಮಾರಾಟಕ್ಕಿದೆ ಸಿನಿಮಾ ಸದ್ಯದಲ್ಲೇ ಆಡಿಯೋ ಬಿಡುಗಡೆಗೊಳಿಸಿ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ.