ಕರ್ನಾಟಕ

karnataka

ಟೆನ್ನಿಸ್ ಪ್ಲೇಯರ್ ಜೊತೆ ನಟ ವಿಷ್ಣುವಿಶಾಲ್ ಡೇಟಿಂಗ್​...! ಇದು ನಿಜಾನಾ?

By

Published : Jun 6, 2019, 8:17 PM IST

ಟೆನ್ನಿಸ್ ತಾರೆ ಜ್ವಾಲಾಗುಟ್ಟಾ ಹಾಗೂ ತಮಿಳುನಟ ವಿಷ್ಣುವಿಶಾಲ್ ಡೇಟಿಂಗ್​​​​​ ಮಾಡುತ್ತಿದ್ದಾರೆ ಎಂಬ ಮಾತು ಕಾಲಿವುಡ್​​ನಲ್ಲಿ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಶಾಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜ್ವಾಲಾ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಷ್ಣುವಿಶಾಲ್

ಸಿನಿಮಾ ನಟರು ಕ್ರೀಡಾ ತಾರೆಯರೊಂದಿಗೆ ಡೇಟಿಂಗ್​ ಮಾಡುವುದು, ಪ್ರೀತಿಸಿ ಮದುವೆಯಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಬಾಲಿವುಡ್ ನಟಿ ಶರ್ಮಿಳಾ ಠಾಕೂರ್​ ​ ​​-ಪಠೌಡಿ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಮಹೇಂದ್ರ ಭೂಪತಿ-ಲಾರಾದತ್ತಾ ಹಾಗೂ ಇನ್ನಿತರ ಜೋಡಿಗಳು ಇದಕ್ಕೆ ಉದಾಹರಣೆ.

ವಿಷ್ಣುವಿಶಾಲ್ ಜೊತೆ ಜ್ವಾಲಾಗುಟ್ಟಾ

ಇದೀಗ ತಮಿಳುನಟ ವಿಷ್ಣುವಿಶಾಲ್ ಹಾಗೂ ಟೆನ್ನಿಸ್ ಆಟಗಾರ್ತಿ ಜ್ವಾಲಾಗುಟ್ಟಾ ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಇತ್ತೀಚೆಗೆ ಜ್ವಾಲಾ ಟೆನ್ನಿಸ್​​ನಲ್ಲಿ ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ತಮಿಳು ಬಿಗ್​​​​​ಬಾಸ್​​​​​​​​​​ -3 ರಲ್ಲಿ ಜ್ವಾಲಾ ಭಾಗವಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತಾದರೂ ಜ್ವಾಲಾ ಇದನ್ನು ನಿರಾಕರಿಸಿದ್ದರು. ಇದೀಗ ಅವರು ವಿಷ್ಣು ಜೊತೆ ಡೇಟಿಂಗ್​ನಲ್ಲಿದ್ದಾರೆ ಎಂಬ ಕಾರಣಕ್ಕೆ ಚರ್ಚಾ ವಿಷಯವಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿಷ್ಣು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜ್ವಾಲಾ ಜೊತೆಗಿನ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಜ್ವಾಲಾಗುಟ್ಟಾ, ವಿಷ್ಣುವಿಶಾಲ್​​​

ಜ್ವಾಲಾ ಗುಟ್ಟಾ 2005 ರಲ್ಲಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಈ ಜೋಡಿ 2011 ರಲ್ಲಿ ವಿಚ್ಛೇದನ ಪಡೆದಿತ್ತು. ಇನ್ನು ನಟ ವಿಷ್ಣುವಿಜಯ್ ಕೂಡಾ ಕಳೆದ ವರ್ಷ ನಟ ಕೆ. ನಟರಾಜ್ ಪುತ್ರಿ ರಜಿನಿ ನಟರಾಜ್ ಅವರಿಗೆ ಡೈವೋರ್ಸ್​ ನೀಡಿದ್ದರು. ಈ ಕಾರಣ ಜ್ವಾಲಾಗುಟ್ಟಾ ಹಾಗೂ ವಿಷ್ಣುವಿಶಾಲ್ ಡೇಟಿಂಗ್​ನಲ್ಲಿದ್ದು ಈ ಸಂಬಂಧ ಇನ್ನೂ ಮುಂದುವರೆಯಬಹುದಾ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಆದರೆ, ಇದುವರೆಗೂ ವಿಷ್ಣುವಿಶಾಲ್ ಆಗಲಿ ಜ್ವಾಲಾ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

For All Latest Updates

TAGGED:

ABOUT THE AUTHOR

...view details