ಕರ್ನಾಟಕ

karnataka

ETV Bharat / sitara

ಇನ್ನೂ ಒಂದು ವರ್ಷ ರಾಬರ್ಟ್‌ 'ದರ್ಶನ'ವಿಲ್ಲ.. ನಿರ್ಮಾಪಕ ಉಮಾಪತಿ ಅದಕ್ಕೆ ಹೀಗಂತಾರೆ..

ನಮ್ಮ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ನೋಡಿದ್ರೇ, ಕನ್ನಡ ಚಿತ್ರರಂಗ ಸಹಜ ಸ್ಥಿತಿಗೆ ಬರೋದಿಕ್ಕೆ ಒಂದು ವರ್ಷ ಆಗುತ್ತೆ. ಅಲ್ಲಿವರೆಗೂ ರಾಬರ್ಟ್ ಸಿನಿಮಾ ರಿಲೀಸ್ ಮಾಡುವ ಯೋಚನೆ ಇಲ್ಲ. ದರ್ಶನ್ ಸಿನಿಮಾ ಬಹಳ ಲೇಟಾದಷ್ಟು ನಮಗೆ ಲಾಭ, ಅದಕ್ಕೆ ಸಾಕ್ಷಿ ಕುರುಕ್ಷೇತ್ರ ಸಿನಿಮಾ..

Robert Cinema
ರಾಬರ್ಟ್​​ ಸಿನಿಮಾ

By

Published : Jun 22, 2020, 9:04 PM IST

ಕೊರೊನಾ ವೈರಸ್​ನಿಂದಾಗಿ ಇಡೀ ವಿಶ್ವವೇ ನಡುಗಿ ಹೋಗಿದೆ. ಇದರ ಪರಿಣಾಮ ಜನ ಸಾಮಾನ್ಯರಿಂದ ಹಿಡಿದು, ದೊಡ್ಡ ದೊಡ್ಡ ಉದ್ಯಮಿಗಳಿಗೆ ತಟ್ಟಿದೆ. ಈ ಎಫೆಕ್ಟ್ ಸಿನಿಮಾ ರಂಗಕ್ಕೂ ಹೊರತಾಗಿಲ್ಲ. ಸತತ ಮೂರು ತಿಂಗಳಿನಿಂದ ಸಿನಿಮಾ ಶೂಟಿಂಗ್ ಹಾಗೂ ಸಿನಿಮಾ ಪ್ರದರ್ಶನವಿರದೆ ಸ್ಯಾಂಡಲ್​​​ವುಡ್ ನಲುಗಿದೆ.

ಸದ್ಯ ರಾಜ್ಯ ಸರ್ಕಾರ ಹತ್ತಾರು ಮಾರ್ಗಸೂಚಿಗಳನ್ನ ಹೊರಡಿಸಿ, ಎರಡು ದಿನದ ಹಿಂದೆ ಸಿನಿಮಾ ಶೂಟಿಂಗ್​​​​ಗೆ ಅನುಮತಿ‌ ನೀಡಿದೆ. ಆದರೆ, ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​​​ಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಲಾಡ್​​​ಡೌನ್ ಸಡಿಲಿಕೆ ಮಾಡಿಲ್ಲ. ಇದರ ಎಫೆಕ್ಟ್ ಬಿಗ್ ಸ್ಟಾರ್ ಸಿನಿಮಾಗಳ ಮೇಲೆ ತಟ್ಟಿದೆ. ಅದರಲ್ಲಿ ದರ್ಶನ್ ಅಭಿಮಾನಿಗಳಿಗೆ ಈ ಸುದ್ದಿ ನಿಜವಾಗ್ಲೂ ಬೇಸರ ಮೂಡಿಸುತ್ತೆ.

ರಾಬರ್ಟ್​​ ಸಿನಿಮಾದ ಲುಕ್‌ನಲ್ಲಿ ನಟ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ, ಲಾಕ್​​​ಡೌನ್ ನಂತರ ರಿಲೀಸ್ ಆಗುವ ಮೊದಲ ಸಿನಿಮಾ ರಾಬರ್ಟ್ ಅಂತಾ ಹೇಳಲಾಗಿತ್ತು. ಆದರೆ, ರಾಬರ್ಟ್ ಚಿತ್ರ ನಿರ್ಮಾಪಕ ಉಮಾಪತಿ, ಸಿನಿಮಾ ಈ ವರ್ಷ ರಿಲೀಸ್ ಆಗೋದು ಡೌಟ್ ಅಂತಿದ್ದಾರೆ. ಸೆನ್ಸಾರ್​​​ಗೆ ರೆಡಿಯಾಗಿರೋ ರಾಬರ್ಟ್ ಸಿನಿಮಾವನ್ನು ಒಂದು ವರ್ಷ ತಡ ಆದರೂ ಪರವಾಗಿಲ್ಲ ಚಿತ್ರರಂಗ ಸಹಜ ಸ್ಥಿತಿಗೆ ಬಂದ ಮೇಲೆ ರಿಲೀಸ್ ಮಾಡ್ತೀನಿ ಅಂತಿದ್ದಾರೆ.
ಸದ್ಯ ಸೆನ್ಸಾರ್ ಟೇಬಲ್​​​ನಲ್ಲಿರುವ ರಾಬರ್ಟ್ ಸಿನಿಮಾಗೆ, ಅತೀ ಹೆಚ್ಚು ಬೆಲೆಗೆ ಖರೀದಿಸಲು ಡಿಜಿಟಲ್ ಪ್ಲಾರ್ಟ್ ಫಾರಂನಲ್ಲಿ ಬೇಡಿಕೆ ಬಂದಿದೆ ಅಂತಾರೆ ನಿರ್ಮಾಪಕರು. ಆದರೆ, ನಾನು ಡಿಜಿಟಲ್ ಪ್ಲಾರ್ಟ್ ಫಾರಂನಲ್ಲಿ ರಿಲೀಸ್ ಮಾಡುವ ಯೋಚನೆ ಮಾಡಿಲ್ಲ. ಯಾಕೆಂದರೆ, 50 ಕೋಟಿ ಬಜೆಟ್​​​ನಲ್ಲಿ ಸಿನಿಮಾ ನಿರ್ಮಾಣ ಮಾಡಿ, ಡಿಜಿಟಲ್ ಪ್ಲಾರ್ಟ್ ಫಾರಂನಲ್ಲಿ ರಿಲೀಸ್ ಮಾಡೋದು ಇಷ್ಟ ಇಲ್ಲ ಎನ್ನುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಿರ್ಮಾಪಕ ಉಮಾಪತಿ

ಬಿಗ್ ಸ್ಟಾರ್​ಗಳ ಬಿಗ್ ಬಜೆಟ್ ಸಿನಿಮಾಗಳು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ರೆ ಚೆನ್ನಾಗಿರುತ್ತೆ. ಚಿತ್ರಮಂದಿರದ ಮಾಲೀಕರಿಗೂ ಇಂತಹ ಸಿನಿಮಾಗಳಿಂದ ಕಲೆಕ್ಷನ್ ಚೆನ್ನಾಗಿ ಆಗುತ್ತೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾನು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ನಿರ್ಧಾರ ಮಾಡಿದ್ದೇನೆ.

ಹಾಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿಗಳ ಮಾಲೀಕರಿಗೆ ನಿರ್ಮಾಪಕ ಉಮಾಪತಿ ಒಂದು ಮನವಿ ಮಾಡಿಕೊಂಡಿದ್ದಾರೆ. ಅದೇನಂದ್ರೇ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿಗಳು ಅತ್ಯಾಧುನಿಕ ಸೀಟುಗಳು, ಟಾಯ್ಲೆಟ್​​​​​ಗಳ‌ ಶುಚಿತ್ವ ಹಾಗೂ ಉನ್ನತ ಮಟ್ಟದ ಸ್ಕ್ರೀನಿಂಗ್ ಪರದೆಗಳನ್ನು ಹೊಂದಿರುತ್ತವೆ. ಇಂತಹ ವ್ಯವಸ್ಥೆ ನಮ್ಮ ರಾಜ್ಯದಲ್ಲಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಯಾಕಿಲ್ಲ. ಈ ಬಗ್ಗೆ ಮಾಲೀಕರು ಗಮನ ಹರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.

ಈ ಕೊರೊನಾ ಸಂದರ್ಭದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕು ಅಂದ್ರೆ ನಮ್ಮಲ್ಲಿರುವ ಚಿತ್ರಮಂದಿರಗಳ ಮಾಲೀಕರು, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಪ್ರತಿಯೊಂದು ಸೀಟುಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು. ಹಾಗೇ ಶೌಚಾಲಯದಲ್ಲಿ ಶುಚಿತ್ವ ಕಾಪಾಡಬೇಕು. ಆಗ ಮಾತ್ರ ಪ್ರೇಕ್ಷಕರು ಕುಟುಂಬದೊಂದಿಗೆ ಬರ್ತಾರೆ. ಇಲ್ಲದಿದ್ರೆ‌ ಜನರು ಥಿಯೇಟರ್ ಕಡೆ ಮುಖ ಮಾಡುವುದು ಕಮ್ಮಿ ಎಂದರು.

ನಮ್ಮ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ನೋಡಿದ್ರೇ, ಕನ್ನಡ ಚಿತ್ರರಂಗ ಸಹಜ ಸ್ಥಿತಿಗೆ ಬರೋದಿಕ್ಕೆ ಒಂದು ವರ್ಷ ಆಗುತ್ತೆ. ಅಲ್ಲಿವರೆಗೂ ರಾಬರ್ಟ್ ಸಿನಿಮಾ ರಿಲೀಸ್ ಮಾಡುವ ಯೋಚನೆ ಇಲ್ಲ. ದರ್ಶನ್ ಸಿನಿಮಾ ಬಹಳ ಲೇಟಾದಷ್ಟು ನಮಗೆ ಲಾಭ, ಅದಕ್ಕೆ ಸಾಕ್ಷಿ ಕುರುಕ್ಷೇತ್ರ ಸಿನಿಮಾ ಎಂದರು. ಈ ಸಿನಿಮಾ ಶೂಟಿಂಗ್ ಆಗೋದಕ್ಕೆ ಎರಡು ವರ್ಷ ಬೇಕಾಯಿತು. ಈ ಸಿನಿಮಾ ಎರಡು ವರ್ಷ ಆಗಿ ರಿಲೀಸ್ ಆದ್ರೂ ಚಿತ್ರಮಂದಿರಗಳಲ್ಲಿ 50 ರಿಂದ 60 ಕೋಟಿ ಕಲೆಕ್ಷನ್ ಮಾಡಿದೆ. ಈ ಕಾರಣಕ್ಕೆ ರಾಬರ್ಟ್ ಈ ವರ್ಷ ರಿಲೀಸ್ ಮಾಡೋದಿಲ್ಲ ಅಂತಾ ನಿರ್ಮಾಪಕ ಉಮಾಪತಿ ನಿರ್ಧರಿಸಿದ್ದಾರೆ. ಇದರಿಂದ ದಾಸನ ಅಭಿಮಾನಿಗಳಿಗೆ ಬೇಸರ ಆಗೋದು ಗ್ಯಾರಂಟಿ.

ABOUT THE AUTHOR

...view details