ಕಳೆದ ಮೂರು ವಾರಗಳಿಂದ ಅನಾರೋಗ್ಯದ ಕಾರಣ ನಟ ಸುದೀಪ್ ನಿರೂಪಣೆ ಇಲ್ಲದೆಯೇ ಬಿಗ್ಬಾಸ್ ಮನೆಯಲ್ಲಿ ವೀಕೆಂಡ್ ಕಾರ್ಯಕ್ರಮ ನಡೆಯುತ್ತಿದೆ. ಈ ವಾರವೂ ಸುದೀಪ್ ಇಲ್ಲದಿರುವ ಕಾರಣ ಎಲಿಮಿನೇಷನ್ ಪ್ರಕ್ರಿಯೆ ನಡೆಯದಿರಬಹುದು ಎಂಬ ಮಾತು ಕೇಳಿಬರುತ್ತಿವೆ.
ಕಳೆದ ಎರಡನೇ ವಾರ ಗಾಯಕ ವಿಶ್ವನಾಥ್, ಕಳೆದ ವಾರ ರಾಜೀವ್ ಎಲಿಮಿನೇಟ್ ಆಗಿದ್ದರು. ಆದರೆ, ಈ ವಾರ ಪ್ರಿಯಾಂಕ ಹಾಗೂ ದಿವ್ಯಾ ಸುರೇಶ್ ನೇರ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದರೂ, ಎಲಿಮಿನೇಟ್ ಯಾರು ಆಗುವುದಿಲ್ಲ ಎನ್ನಲಾಗುತ್ತಿದೆ.
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಾಳುಗಳು ಉಳಿದಂತೆ ಈಗಾಗಲೇ 64 ದಿನಗಳು ಕಳೆದಿದ್ದು, 40 ದಿನಗಳು ಉಳಿಯಲಿದೆ. ಹಾಗೆಯೇ, ಮನೆಯಲ್ಲಿ ಹೆಚ್ಚಿನ ಸದಸ್ಯರು ಇನ್ನು ಉಳಿದಿದ್ದಾರೆ. ಹೀಗಾಗಿ, ಮುಂದಿನವಾರ ಇಬ್ಬರೂ ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಆದರೆ ಮುಂದಿನವಾರ ನಟ ಸುದೀಪ್ ವೀಕೆಂಡ್ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬೆಂಗಳೂರಿನಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಹಾಗೂ ಹೆಚ್ಚಿನ ಓಡಾಟ ತಪ್ಪಿಸಲು ಸುದೀಪ್ ಈ ವಾರವೂ ಗೈರಾಗಿದ್ದಾರೆ.
ಓದಿ:ಅಮೀರ್ ಖಾನ್ ಜೊತೆ ಯುದ್ಧದ ಚಿತ್ರೀಕರಣದಲ್ಲಿ ನಾಗ ಚೈತನ್ಯ