ಕೊರೊನಾದಿಂದ ಮುಚ್ಚಿದ್ದ ಚಿತ್ರಮಂದಿರಗಳು ಹಾಗು ಮಲ್ಟಿಪ್ಲೆಕ್ಸ್ ಗಳು ಓಪನ್ ಆಗೋದಕ್ಕೆ ಕಾಲ ಕೂಡಿ ಬಂದಿದ್ದು, ಸಿನಿ ಪ್ರಿಯರಿಗೆ ಸರ್ಕಾರ ಸಂತಸದ ಸುದ್ದಿ ನೀಡಲಿದೆ.
ಕೊರೊನಾ ಎಫೆಕ್ಟ್ ಈವರೆಗೆ ಯಾರನ್ನೂ ಬಿಟ್ಟಿಲ್ಲ. ಅದೇ ರೀತಿ ಭಾರತೀಯ ಚಿತ್ರರಂಗದ ಮೇಲೆ ಕೊರೊನಾ ಕರಿಛಾಯೆ ಅವರಿಸಿದೆ. ಕಳೆದ ಐದು ತಿಂಗಳಿನಿಂದ ಸಿನಿಮಾ ಶೂಟಿಂಗ್ ಹಾಗೂ ಸಿನಿಮಾ ಪ್ರದರ್ಶನ ಇಲ್ಲದೆ ಸಿನಿಮಾ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಮಾಲೀಕರಿಗೆ ಯಾವುದೇ ಆದಾಯ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಆಗಸ್ಟ್ ನಲ್ಲಿ ಚಿತ್ರಮಂದಿರಗಳು ಹಾಗು ಮಲ್ಟಿಪ್ಲೆಕ್ಸ್ ಗಳನ್ನು ತೆರೆಯಲು ಕಾಲ ಕೂಡಿ ಬಂದಿದೆ.
ಕೊರೊನಾ ಎಫೆಕ್ಟ್ ನಿಂದಾಗಿ ಐದು ತಿಂಗಳಿನಿಂದ ಸಿನಿಮಾ ಪ್ರದರ್ಶನ ಇಲ್ಲದೆ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಗಳು ಬಾಗಿಲು ಮುಚ್ಚಿದ್ದವು. ಈ ಹಿನ್ನಲೆಯಲ್ಲಿ ಚಿತ್ರಮಂದಿರದ ಮಾಲೀಕರು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳನ್ನ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿ ಎಂದು ಕೇಳಿದ್ದರು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಚಿತ್ರಮಂದಿಗಳನ್ನು ತೆರೆಯುವುದಾಗಿ ಥಿಯೇಟರ್ ಮಾಲೀಕರು ಕೇಂದ್ರ ಸರ್ಕಾರದ ಗಮನಕ್ಕೆ ತಂದರು. ಹೀಗಾಗಿ ಇದರ ಬಗ್ಗೆ ಕೇಂದ್ರ ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ ಅಂತಾ ಹೇಳಲಾಗಿದೆ. ಸದ್ಯ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿರುವ ಪ್ರಕಾರ ಅಗಸ್ಟ್ ನಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಗಳು ಓಪನ್ ಆಗೋದು ಅಧಿಕೃತವಾಗಿದೆ.
ಕೇಂದ್ರ ಗೃಹ ಇಲಾಖೆ ಕೂಡಾ, ಮಾರ್ಗ ಸೂಚಿ ಅನ್ವಯ ಚಿತ್ರಮಂದಿಗಳು ಹಾಗೂ ಮಲ್ಟಿಪ್ಲೆಕ್ಸ್ ಗಳನ್ನು ತೆರೆಯಲು ಅವಕಾಶ ನೀಡಬಹುದು ಅಂತಾ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ನಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿಗಳು ಮತ್ತು ಮಲ್ಟಿಪ್ಲೆಕ್ಸ್ ಗಳನ್ನು ತೆರೆಯುುವುದು ಬಹುತೇಕ ಖಚಿತವಾಗಿದೆ. ಅದೇ ರೀತಿ ಸಿಎಂ ಯಡಿಯೂರಪ್ಪ ಕೂಡಾ, ರಾಜ್ಯದಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಗನ್ನ ತೆರೆಯೋದಿಕ್ಕೆ ಅವಕಾಶ ನೀಡಲು ಯಾವುದೇ ಸಮಸ್ಯೆ ಇಲ್ಲವೆಂದು ಹಲವು ಸಭೆಯಲ್ಲಿ ತಿಳಿಸಿದ್ದಾರೆ.