ಬೆಂಗಳೂರು: ಕನ್ನಡದ ಕೆಜಿಎಫ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಖ್ಯಾತ ಖಳನಟ ಜಾನ್ ಕೊಕೇನ್ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದು, ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ.
ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ ಕೆಜಿಎಫ್ ವಿಲನ್! - sandalwood
ಖ್ಯಾತ ಖಳ ನಟ ಜಾನ್ ಕೊಕೇನ್ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದು, ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ.
ಕೇರಳದ ವಿಶು ಹಬ್ಬದ ಸಂಭ್ರಮದಂದೇ ಈ ಜೋಡಿಯ ವಿವಾಹ ಜರುಗಿದ್ದು, ಮದುವೆ ಸಂಭ್ರಮದಲ್ಲಿ ಸಿಂಪಲ್ ಕಾಟನ್ ಕಾಸ್ಟ್ಯೂಮ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಜಾನ್ ಕೊಕೇನ್ ಜೇಕಬ್ ವರ್ಗಿಸ್ ನಿರ್ದೇಶನದ ಪುನೀತ್ ರಾಜ್‌ಕುಮಾರ್ ನಟನೆಯ ಪೃಥ್ವಿ ಸಿನಿಮಾ ಮೂಲಕ ಜಾನ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು.
ಮೂಲತಃ ಕೇರಳದವರಾದ ಜಾನ್, ಮಾಡೆಲಿಂಗ್ ಕ್ಷೇತ್ರದಲ್ಲೂ ಸಹ ಸಾಕಷ್ಟು ಹೆಸರು ಮಾಡಿದ್ರು. ಅಲ್ಲದೆ ಕನ್ನಡದ ಸ್ಟಾರ್ ನಟರಾದ ದರ್ಶನ್ ಅಭಿನಯದ ಶೌರ್ಯ, ಶಿವಣ್ಣ ಜೊತೆಗೆ ಮೈಲಾರಿ ಹೀಗೆ ಹಲವು ಸಿನಿಮಾಗಳಲ್ಲಿ ಖಳ ನಟನಾಗಿ ಅಬ್ಬರಿಸಿದ್ದಾರೆ. ಸದ್ಯ ಪುನೀತ್ ಅಭಿನಯದ ಯುವರತ್ನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಜಾನ್, ಸೌತ್ ಇಂಡಿಯಾದ ಬಹು ಬೇಡಿಕೆಯ ನಟರಾಗಿದ್ದಾರೆ.