ಕರ್ನಾಟಕ

karnataka

ETV Bharat / sitara

"ಯುವರತ್ನ"ನ ಆಗಮನಕ್ಕೆ ಮುಹೂರ್ತ ಫಿಕ್ಸ್: ಪವರ್​​ ಸ್ಟಾರ್​ ಅಭಿಮಾನಿಗಳಲ್ಲಿ ಸಂಭ್ರಮ - the team yuvarathna planning for cinema releas date

ದೊಡ್ಮನೆ ಹುಡುಗ ಅಪ್ಪು ಬಹುದಿನಗಳ ನಂತರ ಮಾಫಿಯಾ ವಿರುದ್ಧ ರೊಚ್ಚಿಗೇಳುವ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ "ಯುವರತ್ನ". ಸದ್ಯ ಈ ಚಿತ್ರದ ಕುರಿತಾಗಿ ಸಿನಿ ಟೀಂ ನಿಂದ ಫ್ಯಾನ್ಸ್​ಗೆ ಸಿಹಿ ಸುದ್ದಿವೊಂದು ಬಂದಿದೆ.

"ಯುವರತ್ನ"

By

Published : Sep 25, 2019, 3:20 PM IST

'ಯುವರತ್ನ' ಯಾವಗಪ್ಪಾ ಈ ಚಿತ್ರ ನೋಡ್ತಿವಿ ಅಂತಾ ದೊಡ್ಮನೆ"ರಾಜಕುಮಾರ"ನ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿರುವ ಹೈವೋಲ್ಟೇಜ್ ಚಿತ್ರ ಯುವರತ್ನ. ಚಿತ್ರದಲ್ಲಿ ಅಪ್ಪು ಬಹುದಿನಗಳ ನಂತರ ಶಿಕ್ಷಣದ ಕ್ಷೇತ್ರದಲ್ಲಿ ಮಾಫಿಯಾ ವಿರುದ್ಧ ರೊಚ್ಚಿಗೇಳುವ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರೋದರಿಂದ ಚಿತ್ರವನ್ನು ಕಣ್ತುಂಬಿಕೊಳ್ಳಲು ಪುನೀತ್​ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಈಗ ಪವರ್ ಸ್ಟಾರ್ ಫ್ಯಾನ್ಸ್​ಗೆ "ಯುವರತ್ನ" ಟೀಂ ನಿಂದ ಗುಡ್ ನ್ಯೂಸ್ ಸಿಕ್ಕಿದೆ.

ವಾರಕ್ಕೆ ಮುಂಚೆ ಪುನೀತ್​ ಅಭಿಮಾನಿಗಳಲ್ಲಿ ದಸರಾ ಸಂಭ್ರಮ

ಯುವರತ್ನ ಚಿತ್ರವನ್ನು ಈಗಾಗಲೇ ಬೆಂಗಳೂರು, ಮೈಸೂರು, ಕರಾವಳಿ ತೀರಗಳಲ್ಲಿ ಶೂಟಿಂಗ್ ನಡೆಸಿದ್ದು, ಶೇಖಡ 60% ಶೂಟಿಂಗ್ ಮುಗಿದಿದೆ. ಇನ್ನು 40 ರಷ್ಟು ಭಾಗದ ಶೂಟಿಂಗ್ ಬಾಕಿ ಇದೆ. ಅಲ್ಲದೆ ಉಳಿದ ಭಾಗವನ್ನು ಆದಷ್ಟು ಬೇಗ ಮುಗಿಸಿ ಕುಂಬಳಕಾಯಿ ಒಡೆದು, ಕ್ರಿಸ್​ಮಸ್​​​​​​ ವೇಳೆಗೆ " ಯುವರತ್ನ" ನನ್ನು ತೆರೆ ಮೇಲೆ ತರಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಪ್ಲಾನ್ ಮಾಡಿದ್ದಾರಂತೆ.

ಇತ್ತೀಚೆಗಷ್ಟೇ ಯುವರತ್ನ ಚಿತ್ರತಂಡ ದಸರಾ ಹಬ್ಬಕ್ಕೆ ಟೀಸರ್ ರಿಲೀಸ್ ಲಾಂಚ್ ಮಾಡೋದಾಗಿ ಹೇಳಿತ್ತು. ಈಗ ಯುವರತ್ನ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅಪ್ಪು ಅಭಿಮಾನಿಗಳಿಗೆ ಒಂದು ವಾರ ಮುಂಚೆಯೇ ದಸರಾಕ್ಕೆ ಸಿಹಿ ಸುದ್ದಿ ಸಿಕ್ಕಿದೆ.

ABOUT THE AUTHOR

...view details