ಮುಂಬೈ :ಕಾರ್ಗಿಲ್ನಲ್ಲಿ ಟ್ರೈಲರ್ ಬಿಡುಗಡೆ ಬಳಿಕ 'ಶೇರ್ ಷಾ' ಚಿತ್ರತಂಡ ಮುಂಬೈಗೆ ವಾಪಾಸಾಗಿದೆ. 'ಶೇರ್ ಷಾ' 1999 ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧ ಪರಂ ವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಬಯೋಗ್ರಫಿ ಚಿತ್ರವಾಗಿದೆ.
ಕಾರ್ಗಿಲ್ನಲ್ಲಿ ಟ್ರೈಲರ್ ಬಿಡುಗಡೆ ಬಳಿಕ ಮುಂಬೈಗೆ ಮರಳಿದ 'ಶೇರ್ ಷಾ ಚಿತ್ರ' ತಂಡ - ಶೇರ್ ಷಾ ನಿರ್ದೇಶಕ
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಬಯೋಗ್ರಫಿ ಆಧಾರಿತ ಚಿತ್ರ 'ಶೇರ್ ಷಾ' ತಂಡ ಕಾರ್ಗಿಲ್ನಿಂದ ಮುಂಬೈಗೆ ಮರಳಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಕಾರ್ಗಿಲ್ನಲ್ಲಿ ಬಿಡುಗಡೆಯಾಗಿತ್ತು.
ಮುಂಬೈಗೆ ಮರಳಿದ 'ಶೇರ್ ಷಾ ಚಿತ್ರ' ತಂಡ
ವಿಷ್ಣುವರ್ಧನ್ ನಿದೇರ್ಶನದ ಮತ್ತು ಕರಣ್ ಜೋಹರ್ ಸಹ ನಿರ್ದೇಶನದ ಶೇರ್ ಷಾದಲ್ಲಿ, ಸಿದ್ದಾರ್ಥ್ ಮಲ್ಹೋತ್ರ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯೋಧ ಬಾತ್ರ ಮತ್ತು ಅವರ ಅವಳಿ ಸಹೋದರ ವಿಶಾಲ್ ಪಾತ್ರಕ್ಕೆ ಸಿದ್ದಾರ್ಥ್ ಜೀವ ತುಂಬಲಿದ್ದಾರೆ.
ಸಿದ್ದಾರ್ಥ್ಗೆ ನಾಯಕಿಯಾಗಿ ಡಿಂಬಲ್ ಚೀಮಾ ಪಾತ್ರದಲ್ಲಿ ಕಿಯಾರ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ.