ತಮಿಳು ನಟಿ ಮೀರಾ ಮಿಥುನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಕೆಲವು ಜನರ ಕಿರುಕುಳದಿಂದ ನೊಂದು ನಾನು ಖಿನ್ನತೆಗೆ ಒಳಗಾಗಿದ್ದು, ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ನಟಿ ಟ್ವೀಟ್ನಲ್ಲಿ ಹೇಳಿದ್ದಾರೆ.
ತಮ್ಮ ಟ್ವೀಟ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಿದ್ದು, ನನ್ನ ಸಾವಿನ ಕುರಿತು ಕ್ರಮ ತೆಗೆದುಕೊಂಡರೆ ಸಾವಿಗೆ ಕಾರಣವಾದವರನ್ನೆಲ್ಲಾ ಗಲ್ಲಿಗೇರಿಸಬೇಕು ಎಂದು ಬರೆದುಕೊಂಡಿದ್ದಾರೆ.
ಕಳೆದ 3 ವರ್ಷಗಳಿಂದ ನಾನು ಕಿರುಕುಳಕ್ಕೆ ಒಳಗಾಗಿದ್ದೇನೆ. ಆದ್ರಿಂದ ನಾನು ಸೋಷಿಯಲ್ ಮೀಡಿಯಾ ಬಳಸುತ್ತಿಲ್ಲ. ಭಾರತದಲ್ಲಿ ಸ್ವಜನಪಕ್ಷಪಾತವು ನನ್ನನ್ನು ಕೊಲ್ಲುತ್ತಿದೆ. ನಾನೀಗ ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗಿದ್ದು, ನೋವನ್ನು ಕೊನೆಗಾಣಲು ಸಾಯಲು ಬಯಸುತ್ತೇನೆ ಎಂದಿದ್ದಾರೆ.
ನನಗೆ ಒಳ್ಳೆಯ ಕೆಲಸವಿದೆ ಹಾಗೂ ಒಳ್ಳೆಯ ಕುಟುಂಬ ಮತ್ತು ಸ್ನೇಹಿತರಿದ್ದಾರೆ. ಆದ್ರೆ ನನ್ನ ಶತ್ರುಗಳು ನಾನು ಸಾಯಲೆಂದು ಬಯಸುತ್ತಿದ್ದಾರೆ. ಆದ್ರಿಂದ ನಾನು ಸಾಯಲು ಮುಂದಾಗಿರುವುದಾಗಿ ಬರೆದುಕೊಂಡಿದ್ದಾರೆ.
ಮೀರಾ ಮಿಥುನ್ ತಮಿಳಿನ ಬಿಗ್ಬಾಸ್ ಸೀಸನ್ 3ರ ಸ್ಪರ್ಧಿಯಾಗಿದ್ದರು. ಅಲ್ಲದೆ ಜೋಡಿ ನಂಬರ್ ಒನ್ ರಿಯಾಲಿಟಿ ಶೋನಲ್ಲಿಯೂ ಸ್ಪರ್ಧಿಸಿದ್ದರು.