ಕರ್ನಾಟಕ

karnataka

ETV Bharat / sitara

ಮತ್ತೆ 'ಒಂಟಿ'ಯಾದರು ಮೇಘನಾ ರಾಜ್..​ - next month

ಸ್ಯಾಂಡಲ್​ವುಡ್​ನ ಅಂದದ ನಟಿ ಮೇಘನಾ ರಾಜ್‌ ನಾನು ಮತ್ತೆ ಒಂಟಿಯಾಗಿದ್ದೀನಿ ಎನ್ನುತ್ತಿದ್ದಾರೆ. ಅರೇ ಇದೇನೆಪ್ಪಾ ಚಿರಂಜೀವಿ ಸರ್ಜಾರನ್ನು ಮದುವೆ ಆಗಿ ಆರಾಮಗಿದ್ದಾರೆ. ಮತ್ತೆ ಯಾಕೆ ಒಂಟಿಯಾದ್ರು ಅನ್ಕೋಬೇಡಿ.. ನಾವು ಹೇಳೋಕೆ ಹೊರಟಿರೋ ವಿಷಯ ಬೇರೇನೆ ಇದೆ.

ಒಂಟಿ ಸಿನಿಮಾ

By

Published : Jun 30, 2019, 9:56 PM IST

ಬೆಂಗಳೂರು: ಸ್ಯಾಂಡಲ್​ವುಡ್​ನ ಅಂದದ ನಟಿ ಮೇಘನಾ ರಾಜ್‌ ನಾನು ಮತ್ತೆ ಒಂಟಿಯಾಗಿದ್ದೀನಿ ಎನ್ನುತ್ತಿದ್ದಾರೆ. ಅರೇ ಇದೇನೆಪ್ಪಾ ಚಿರಂಜೀವಿ ಸರ್ಜಾರನ್ನು ಮದುವೆ ಆಗಿ ಆರಾಮಗಿದ್ದಾರೆ ಮತ್ತೆ ಯಾಕೆ ಒಂಟಿಯಾದ್ರು ಅನ್ಕೋಬೇಡಿ.. ನಾವು ಹೇಳೋಕೆ ಹೋರಟಿರೋ ವಿಷಯ ಬೇರೆನೆ ಇದೆ..

ವಿಷಯ ಇಷ್ಟೇ ಒಂಟಿ ಅನ್ನೋದು ಕನ್ನಡದ ಹೊಸ ಸಿನಿಮಾ ಹೆಸರು ಕಣ್ರೀ.. ಈ ಸಿನಿಮಾದಲ್ಲಿ ಮೇಘನಾ ರಾಜ್‌ ಅಭಿನಯಿಸಿದ್ದು, ಮುಂದಿನ ಅಗಸ್ಟ್‌ 5ಕ್ಕೆ ರಿಲೀಸ್​ಗೆ ಚಿತ್ರ ರೆಡಿ ಆಗಿದೆ. ಮೇಘನಾಗೆ ನಾಯಕನಾಗಿ ಆರ್ಯ ನಟಿಸಿದ್ರೆ, ಒರಟ ಐ ಲವ್ ಯೂ ಖ್ಯಾತಿಯ ಶ್ರೀ ಚಿತ್ರಕ್ಕೆ ಆ್ಯಕ್ಷನ್​ ಕಟ್​​ ಹೇಳಿದ್ದಾರೆ. ಒಂದು ಲಾಂಗ್ ಗ್ಯಾಪ್ ತಗೊಂಡು ಮತ್ತೆ ಕಮ್​ಬ್ಯಾಕ್​ ಮಾಡಿದ್ದು, ಚಿತ್ರ ಸಕ್ಸಸ್‌ ಆಗುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ ನಿರ್ದೇಶಕರು. ಮದುವೆ ನಂತರ ನಾಯಕಿಯರು ಸಾಮಾನ್ಯವಾಗಿ ಸಿನಿಮಾ ರಂಗದಿಂದ ದೂರ ಇರ್ತಾರೆ. ಆದರೆ, ಮೇಘನಾ ರಾಜ್‌ ಹಾಗಲ್ಲ. ಮದುವೆ ನಂತರವೂ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಮೇಘನಾ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಒಂಟಿ ಸಿನಿಮಾ ಚಿತ್ರತಂಡದ ಸುದ್ದಿಗೋಷ್ಠಿ

ನಾಯಕ ಆರ್ಯ ಕಿಚ್ಚ ಸುದೀಪ್ ದೂರದ ಸಂಬಂಧಿ. ಈ ಸಂಜೆ ಚಿತ್ರದ ನಂತ್ರ ಒಂಟಿ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಬಂಡವಾಳವನ್ನೂ ಹೂಡಿದ್ದಾರೆ. ಒಂಟಿ ಚಿತ್ರ ಪಕ್ಕಾ ಮಾಸ್‌ ಸಿನಿಮಾವಾಗಿದ್ದು, ಲವ್‌ ಸ್ಟೋರಿಯ ಜೊತೆಗೆ ಭೂಗತ ಜಗತ್ತಿನ ಕಥಾ ಹಂದರವನ್ನು ಹೊಂದಿದೆಯಂತೆ. ಹಾಗಾಗಿ ಮಾಸ್‌ ಮತ್ತು ಕ್ಲಾಸ್‌ ಎರಡೂ ವರ್ಗಕ್ಕೂ ಈ ಸಿನಿಮಾ ಇಷ್ಟವಾಗಲಿದೆ ಎಂಬುದು ಚಿತ್ರ ತಂಡದ ಮಾತು. ಚಿತ್ರದಲ್ಲಿ ಆಶ್ವತ್ ನೀನಾಸಂ. ಮಜಾ ಟಾಕೀಸ್ ಪವನ್ ಸೇರಿ ಹಲವರು ನಟಿಸಿದ್ದು ಒಂಟಿ ಸಾಕಷ್ಟು ಕುತೂಹಲ ಕೆರಳಿಸಿದೆ.

ABOUT THE AUTHOR

...view details