ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಸದ್ದು ಮಾಡ್ತಾನೇ ಇರ್ತಾರೆ. ಸಿನಿಮಾ ವಿಚಾರ ಅಲ್ಲದೆ ತಮ್ಮ ನಿಜ ಜೀವನದ ಕೆಲವು ಅಂಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಗಮನಸೆಳೆಯುತ್ತಾರೆ. ಆದ್ರೆ ಇದೀಗ ಅಕ್ಷಯ್ ಕುಮಾರ್ ಮಡದಿ ಟ್ವಿಂಕಲ್ ಖನ್ನಾ ಒಂದು ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದು, ಫೋಟೋದಲ್ಲಿ ಪತಿ ಅಕ್ಷಯ್ ಮತ್ತು ಪುತ್ರಿ ನಿತಾರ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ.
ಮಗಳ ಜೊತೆ ಮಸ್ತ್ ಕರಾಟೆ ಮಾಡ್ತಿದ್ದಾರೆ ಬಾಲಿವುಡ್ ಕಿಲಾಡಿ - ಅಕ್ಷಯ್ ಕುಮಾರ್ ಮಡದಿ ಟ್ವಿಂಕಲ್ ಖನ್ನ
ಅಕ್ಷಯ್ ಕುಮಾರ್ ಮಗಳು ನಿತಾರಗೆ ಕರಾಟೆ ಪರೀಕ್ಷೆ ಇದ್ದು ಅದರ ತಯಾರಿಗಾಗಿ ತಂದೆಯ ಜೊತೆ ಅಭ್ಯಾಸ ಮಾಡುತ್ತಿದ್ದಾಳೆ. ಇದನ್ನು ಅಕ್ಷಯ್ ಕುಮಾರ್ ಮಡದಿ ಟ್ವಿಂಕಲ್ ಖನ್ನ ಸೋಷಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ನಿತಾರ ಮೊದಲ ಕರಾಟೆ ಪರೀಕ್ಷೆಯನ್ನು ಎದುರಿಸಲು ಸನ್ನದ್ದಳಾಗುತ್ತಿದ್ದಾಳೆ.
![ಮಗಳ ಜೊತೆ ಮಸ್ತ್ ಕರಾಟೆ ಮಾಡ್ತಿದ್ದಾರೆ ಬಾಲಿವುಡ್ ಕಿಲಾಡಿ Akshay Kumar And Nitara practice karate](https://etvbharatimages.akamaized.net/etvbharat/prod-images/768-512-5929698-thumbnail-3x2-giri.jpg)
ನಿತಾರಗೆ ಕರಾಟೆ ಪರೀಕ್ಷೆ ಇದ್ದು ಅದರ ತಯಾರಿಗಾಗಿ ತಂದೆಯ ಜೊತೆ ಅಭ್ಯಾಸ ಮಾಡುತ್ತಿದ್ದಾಳೆ. ಇದನ್ನು ಟ್ವಿಂಕಲ್ ಖನ್ನಾ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನಿತಾರ ಮೊದಲ ಕರಾಟೆ ಪರೀಕ್ಷೆಯನ್ನು ಎದುರಿಸಲು ಸನ್ನದ್ಧಳಾಗುತ್ತಿದ್ದಾಳೆ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಕ್ವಿಂಕಲ್, 'ಮೊದಲ ಕರಾಟೆ ಪರೀಕ್ಷೆಗೆ ತೆರಳುವ ಮುನ್ನ ಒಂದು ಕೊನೆಯ ಕಿಕ್' ಎಂದು ಬರೆದಿದ್ದಾರೆ.
ಇನ್ನು, ಟ್ವಿಂಕಲ್ ಖನ್ನಾ ಮತ್ತು ಅಕ್ಷಯ್ ಕುಮಾರ್ ಜೊತೆಯಾಗಿ ನಟಿಸಿರುವ ಎರಡು ಸಿನಿಮಾಗಳೆಂದರೆ ಇಂಟರ್ನ್ಯಾಷನಲ್ ಕಿಲಾಡಿ ಮತ್ತು ಜುಲ್ಮಿ. ಈ ದಂಪತಿ 2001 ಜನವರಿ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಇವರಿಗೆ ಪುತ್ರಿ ಮತ್ತು ಪುತ್ರ ಇದ್ದಾರೆ.