ಕರ್ನಾಟಕ

karnataka

ಪ್ರೀತಿ, ತ್ಯಾಗದ ನಡುವೆ ಸುತ್ತುವ ಕಥೆಯೇ 'ನೈಟ್​​ಔಟ್​​​​​​​'

By

Published : Apr 14, 2019, 12:33 PM IST

ನೈಟ್​​​​​ಔಟ್​​​

ರಾಕೇಶ್ ಅಡಿಗ ನಿರ್ದೇಶನದ 'ನೈಟ್​​ಔಟ್' ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ರಾಕೇಶ್ ಹತ್ತು ವರ್ಷಗಳ ಕಾಲ ನಟನಾಗಿದ್ದುಕೊಂಡು ಇದೀಗ ಈ ಸಿನಿಮಾ ಮುಖಾಂತರ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.

ಪ್ರೀತಿ, ಸ್ನೇಹ, ಸಂಬಂಧಕ್ಕೆ ಸರಿಯಾದ ಬೆಲೆ ಸಿಗದಿದ್ದರೆ ಅದು ವಾಶ್ಔಟ್ ಆದ ಜೀವನ ಎಂಬುದನ್ನು ರಾಕೇಶ್ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಒಂದು ಸಾದಾರಣ ಕಥೆಗೆ ಆತ್ಮದ ಸ್ಪರ್ಶ ಅಳವಡಿಸಲಾಗಿದೆ. ಚಿತ್ರದ ಕಥಾ ನಾಯಕ ಗೋಪಿ (ಭರತ್) ಆಟೋ ಚಾಲಕ. ಇವನ ಸ್ನೇಹಿತ ಗುಜ್ಜಡ್ (ಅಕ್ಷಯ್)ಗೆ ಶ್ರುತಿ (ಶ್ರುತಿ ಗೋರಾಡಿಯ) ಎಂಬ ಹುಡುಗಿ ಮೇಲೆ ಪ್ರೀತಿಯಾಗುತ್ತದೆ. ಗುಜ್ಜಡ್ ಈ ವಿಷಯವನ್ನು ಗೋಪಿ ಮುಂದೆ ಹೇಳುತ್ತಾನೆ. ಆದರೆ ಗೋಪಿ ಸ್ನೇಹಿತನಿಗೆ ಸಹಾಯ ಮಾಡುವ ನೆಪದಲ್ಲಿ ತಾನೇ ಪ್ರೀತಿ ಬಲೆಗೆ ಬೀಳುತ್ತಾನೆ. ವಿಷಯ ತಿಳಿದ ಗುಜ್ಜಡ್ ತ್ಯಾಗ ಮಾಡುತ್ತಾನೆ.

ಗುಜ್ಜಡ್ ಹೆಸರು ಹೇಳಿಕೊಂಡು ಗೋಪಿ ಶ್ರುತಿ ಬಳಿ ಸಾಕಷ್ಟು ಸುಳ್ಳು ಹೇಳುತ್ತಾನೆ. ಇದನ್ನು ತಿಳಿದ ಶ್ರುತಿ ಗೋಪಿಯಿಂದ ದೂರ ಹೋಗುತ್ತಾಳೆ. ಆದರೆ ಗೋಪಿ ನಿಜವಾಗಿಯೂ ತನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ತಿಳಿದ ಶ್ರುತಿ ಅವನಿಗೆ ಬದಲಾಗುವಂತೆ ಹೇಳಿ ಒಂದು ವರ್ಷ ಕಾಲಾವಕಾಶ ನೀಡುತ್ತಾಳೆ. ಈ ಒಂದು ವರ್ಷದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.

ನಾಯಕ ಭರತ್ ಫೈಟ್ ಹಾಗೂ ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಅಕ್ಷಯ್ ಹಾಗೂ ಶ್ರುತಿ ಗೊರಾಡಿಯ ಆ್ಯಕ್ಟಿಂಗ್ ಕೂಡಾ ಓಕೆ. ಸಮೀರ್​​​​​ ಕುಲಕರ್ಣಿ ಸಂಗೀತ ನಾಟ್ ಗುಡ್ ನಾಟ್ ಬ್ಯಾಡ್ ಎನ್ನುವಂತಿದೆ. 'ಬಿದ್ಲು, ಬಿದ್ಲು' ಎಂಬ ಹಾಡು ಪಡ್ಡೆ ಹುಡುಗರಿಗೆ ಇಷ್ಟ ಆಗುತ್ತದೆ. ಶಮಂತ್ ಹಾಗೂ ಸಂದೀಪ್ ಸಂಭಾಷಣೆ ಅಲ್ಲಲ್ಲಿ ಇಷ್ಟವಾಗುತ್ತದೆ. ನವೀನ್ ಕೃಷ್ಣ ಹಾಗೂ ಲಕ್ಷ್ಮಿ ನವೀನ್ ನಿರ್ಮಾಣದ ‘ನೈಟ್ ಔಟ್’ ಕೊಂಚ ವಿಭಿನ್ನ ಅನುಭವ ನೀಡುವ ಸಿನಿಮಾ ಎನ್ನಬಹುದು.

For All Latest Updates

TAGGED:

ABOUT THE AUTHOR

...view details