ಕರ್ನಾಟಕ

karnataka

ತೆರೆಗೆ ಬರ್ತಿದೆ ಸಂದೀಪ್ ಉನ್ನಿಕೃಷ್ಣನ್​ ಜೀವನ ಆಧಾರಿತ ಸಿನಿಮಾ...ಮೇಜರ್ ಪಾತ್ರ ಮಾಡ್ತಿರೋ ನಟ ಯಾರು...?

By

Published : Nov 28, 2020, 10:31 AM IST

ಮೇಜಪ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧಾರಿತ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದೆ. 'ಮೇಜರ್' ಹೆಸರಿನ ಈ ಚಿತ್ರವನ್ನು ಶಶಿಕಿರಣ್ ತಿಕ್ಕ ನಿರ್ದೇಶಿಸುತ್ತಿದ್ದು ಅದ್ವಿಶೇಷ್ ಸಂದೀಪ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡಿಸೆಂಬರ್ 17 ರಂದು ಈ ಸಿನಿಮಾದ ಫಸ್ಟ್​​​​​ಲುಕ್ ಬಿಡುಗಡೆಯಾಗುತ್ತಿದೆ.

Sandeep unnikrishnan
ಸಂದೀಪ್ ಉನ್ನಿಕೃಷ್ಣನ್​ ಜೀವನ ಆಧಾರಿತ ಸಿನಿಮಾ

26 ನವೆಂಬರ್ 2008 ರಂದು ಮುಂಬೈ ತಾಜ್​ ಹೋಟೆಲ್​​​ನಲ್ಲಿ ಭಯೋತ್ಪಾದಕರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಯಾರಿಗೆ ತಾನೇ ಮರೆಯಲು ಸಾಧ್ಯ..? ಸಂದೀಪ್ ಅವರನ್ನು, ಅವರ ಈ ಈ ಸಾಹಸವನ್ನು ಜೀವಂತವಾಗಿಡುವ ಪ್ರಯತ್ನವನ್ನು ತೆಲುಗು ಚಿತ್ರರಂಗ ಮಾಡುತ್ತಿದೆ.

ಸಂದೀಪ್ ಉನ್ನಿಕೃಷ್ಣನ್ ಅವರ ಜೀವನವನ್ನು ಆಧರಿಸಿದ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದೆ. 'ಮೇಜರ್​​​' ಚಿತ್ರವನ್ನು ಶಶಿ ಕಿರಣ್ ತಿಕ್ಕ ನಿರ್ದೇಶಿಸುತ್ತಿದ್ದು ಸಂದೀಪ್ ಪಾತ್ರವನ್ನು ಅದ್ವಿಶೇಷ್​​​​​​​ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಈ ಚಿತ್ರಕ್ಕೆ ಸಂಬಂಧಿಸಿದ 'ದಿ ಲುಕ್ ಟೆಸ್ಟ್'​​​​​​​​​​​​​​​​ ಎಂಬ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಂದೀಪ್ ಅವರ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದು ಏಕೆ..? ಈ ಸಿನಿಮಾ ಮಾಡಲು ಸಂದೀಪ್ ತಂದೆ ತಾಯಿ ಒಪ್ಪಿದ್ರಾ..? ಎಂಬುದು ಸೇರಿದಂತೆ ಇನ್ನಿತರ ಆಸಕ್ತಿಕರ ವಿಚಾರಗಳನ್ನು ನಾಯಕ ಅದ್ವಿಶೇಷ್ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಸಂದೀಪ್ ಉನ್ನಿ ಕೃಷ್ಣನ್ಅವರು ಮಲಯಾಳಿ ಕುಟುಂಬಕ್ಕೆ ಸೇರಿದವರಾದರೂ ಬೆಂಗಳೂರಿನಲ್ಲಿ ನೆಲೆಸಿದ್ದರು.

ಸಂದೀಪ್ ಉನ್ನಿಕೃಷ್ಣನ್ ಪಾತ್ರ ಮಾಡುತ್ತಿರುವ ಅದ್ವಿಶೇಷ್

ಯಾವುದೇ ಕೆಲಸ ಮಾಡಲು ನಂಬಿಕೆ, ನಿಜಾಯಿತಿ ಬೇಕು, ಇದೇ ಮೇಜರ್ ಸಂದೀಪ್ ಸಿದ್ಧಾಂತ. ನಾನೂ ಕೂಡಾ ಇದೇ ಸಿದ್ಧಾಂತವನ್ನು ಅನುಸರಿಸಿ ಈ ಸಿನಿಮಾವನ್ನು ಆರಂಭಿಸಿದೆ. ಅವರ ಹಾಗೂ ನನ್ನ ಅರ್ಧ ಮುಖವನ್ನು ಒಂದೇ ಫ್ರೇಮ್​​ನಲ್ಲಿ ತೋರಿಸಿರುವ ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು ಡಿಸೆಂಬರ್ 17 ರಂದು ಫಸ್ಟ್​​​ಲುಕ್ ಬಿಡುಗಡೆ ಆಗುತ್ತಿದೆ ಎಂದು ಅದ್ವಿಶೇಷ್ ಹೇಳಿದ್ದಾರೆ. ಸೋನಿ ಪಿಕ್ಚರ್ಸ್, ಜಿಎಂಬಿ ಎಂಟರ್​​​ಟೈನ್ಮೆಂಟ್, ಎಪ್ಲಸ್​​ಎಸ್​​​ ಮೂವೀಸ್ ಸಂಸ್ಥೆ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿವೆ.ಚಿತ್ರಕ್ಕೆ ಶ್ರೀ ಚರಣ್​ ಪೊಕಾಲ ಸಂಗೀತ ನಿರ್ದೇಶಿಸುತ್ತಿದ್ದಾರೆ.

'ದಿ ಲುಕ್ ಟೆಸ್ಟ್'

ABOUT THE AUTHOR

...view details