ಕರ್ನಾಟಕ

karnataka

ETV Bharat / sitara

ವಿವಿಧ ಧಾರಾವಾಹಿಗಳ ಮೂಲಕ ವೀಕ್ಷಕರ ಮನ್ನಣೆ ಪಡೆಯುತ್ತಿರುವ ಕುಲವಧು ತಾರೆಗಳು - Colors Kannada channel

ಜನಪ್ರಿಯ ಧಾರಾವಾಹಿ ಕುಲವಧು ಮುಗಿದು ವರ್ಷವಾಗುತ್ತಾ ಬಂದಿದ್ದು, ಧಾರಾವಾಹಿಯ ನಾಯಕ-ನಾಯಕಿಯರು ಬೇರೆ ಬೇರೆ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ.

The Kulavadhu stars are admired by viewers through various serials
ವಿವಿಧ ಧಾರಾವಾಹಿಗಳ ಮೂಲಕ ವೀಕ್ಷಕರ ಮನ್ನಣೆ ಪಡೆಯುತ್ತಿರುವ ಕುಲವಧು ತಾರೆಗಳು

By

Published : May 25, 2020, 12:28 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕುಲವಧು ಕಳೆದ ವರ್ಷವೇ ಮುಕ್ತಾಯವಾಗಿದೆ. ಇನ್ನೂ ಕುಲವಧು ಧಾರಾವಾಹಿಯ ನಾಯಕ-ನಾಯಕಿಯರು ಕೂಡಾ ತಮ್ಮ ಅಭಿನಯದ ಮೂಲಕ ಮನೆ ಮಾತಾಗಿದ್ದರು. ಸದ್ಯ ಧಾರಾವಾಹಿ ಮುಗಿದು ವರ್ಷವಾಗುತ್ತಾ ಬಂದಿದ್ದು, ಕುಲವಧು ಧಾರಾವಾಹಿಯ ನಾಯಕ-ನಾಯಕಿಯರು ಬೇರೆ ಬೇರೆ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ.

ಶಿಶಿರ್ ಶಾಸ್ತ್ರಿ:

ವೇದ್​ ಅಲಿಯಾಸ್​ ಶಿಶಿರ್ ಶಾಸ್ತ್ರಿ

ಕುಲವಧು ಧಾರಾವಾಹಿಯಲ್ಲಿ ಹಿರಿಯ ಮಗ ವೇದ್ ಆಗಿ ಅಭಿನಯಿಸಿದ್ದ ಶಿಶಿರ್ ಶಾಸ್ತ್ರಿ ಪುಟ್ಟಗೌರಿ ಮದುವೆ, ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ನಟಿಸಿದ್ದರೂ ಮನೆ ಮಾತಾಗಿದ್ದು ಕುಲವಧು ಧಾರಾವಾಹಿಯಿಂದಾಗಿ. ಸದ್ಯ ಶಿಶಿರ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.

ದೀಪಿಕಾ:

ಧನ್ಯಾ ಅಲಿಯಾಸ್​ ದೀಪಿಕಾ

ಕುಲವಧು ಧಾರಾವಾಹಿಯ ಹಿರಿಯ ಸೊಸೆ, ವೇದ್ ಹೆಂಡತಿ ಧನ್ಯಾಳಾಗಿ ಅಭಿನಯಿಸಿ ಮೊದಲ ಬಾರಿಗೆ ಕಿರುತೆರೆ ಯಾನ ಶುರು ಮಾಡಿದ್ರು ದೀಪಿಕಾ. ಅಭಿನಯಿಸಿದ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದ ದೀಪಿಕಾ ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಕೀರ್ತಿಯಾಗಿ ನಟಿಸುತ್ತಿದ್ದಾರೆ.

ಸೂರಜ್:

ಗೌರವ್​ ಅಲಿಯಾಸ್​ ಸೂರಜ್

ಕುಲವಧುವಿನಲ್ಲಿ ಎರಡನೇ ನಾಯಕ ಗೌರವ್ ಆಗಿ ಅಭಿನಯಿಸುತ್ತಿದ್ದ ಸೂರಜ್ ಇದೀಗ ಮುತ್ತುಮಾಮನಾಗಿ ಬದಲಾಗಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ನಾಯಕ ಮುತ್ತುವಾಗಿ ಅಭಿನಯಿಸುತ್ತಿದ್ದ ವಿಕ್ಕಿ ಚೇತನ್ ಪಾತ್ರಕ್ಕೆ ಬಾಯ್ ಹೇಳಿದಾಗ ಅ ಜಾಗಕ್ಕೆ ಬಂದವರೇ ಸೂರಜ್. ಮುತ್ತು ಮಾಮನಾಗಿ ನಟಿಸಿ ಸೈ ಎನಿಸಿಕೊಂಡಿರುವ ಸೂರಜ್ ತೆಲುಗು ಧಾರಾವಾಹಿ ಚಿಟ್ಟಿತಲ್ಲಿಯಲ್ಲಿ ಬಣ್ಣ ಹಚ್ಚುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.

ಅಮೃತಾ:

ವಚನಾ ಅಲಿಯಾಸ್​ ಅಮೃತಾ

ರಾಮಮೂರ್ತಿ ಕುಲವಧುವಿನಲ್ಲಿ ಎರಡನೇ ಸೊಸೆ ವಚನಾಳಾಗಿ ಮಿಂಚಿದ ಗುಂಗುರು ಕೂದಲಿನ ಚೆಲುವೆ ಅಮೃತಾ ರಾಮಮೂರ್ತಿ ಕಿರುತೆರೆಗೆ ಹೊಸಬರೇನಲ್ಲ. ಸರಸ್ವತಿ ಲಕ್ಷ್ಮಿ ಪ್ರಿಯೆ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಪಯಣ ಆರಂಭಿಸಿದ ಅಮೃತಾ ರಾಮಮೂರ್ತಿ ಮುಂದೆ ಮೇಘ ಮಯೂರಿ ಧಾರಾವಾಹಿಯಲ್ಲೂ ನಟಿಸಿದ್ದರು. ನಂತರ ವಚನಾಳಾಗಿ ಬದಲಾದ ಅಮೃತಾ ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ABOUT THE AUTHOR

...view details