ಲಾಸ್ ಏಂಜಲೀಸ್: ಋತುಸ್ರಾವದ ಕುರಿತು ಭಾರತೀಯರಿಗಿರುವ ತಪ್ಪು ಕಲ್ಪನೆಗಳು. ಕುರುಡು ನಂಬಿಕೆಗಳು ಹಾಗೂ ಆಚರಣೆಗಳ ಕುರಿತಾದ ಪಿರಿಯಡ್-ಎಂಡ್ ಆಫ್ ಸೆಂಟೆನ್ಸ್ ಸಾಕ್ಷ್ಯ ಚಿತ್ರಕ್ಕೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಲಭಿಸಿದೆ.
ಸಾಕ್ಷ್ಯಚಿತ್ರ ವಿಭಾಗದಿಂದ 91ನೇ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ ಚಿತ್ರಕ್ಕೆ ಉತ್ತಮ ಗೌರವ ಸಂದಿದೆ. ಇರಾನ್ ಮೂಲದ ಅಮೆರಿಕನ್ ನಿರ್ದೇಶಕಿ ರಯ್ಕಾ ಝೆತಬಿಚಿ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಸಿದ್ದಾರೆ.
ಮಸಾಣ್, ಲಂಚ್ ಬಾಕ್ಸ್ ಸಿನಿಮಾಗಳಿಗೆ ಹಣ ಹೂಡಿದ್ದ ನಿರ್ಮಾಪಕಿ ಗುನೀತ್ ಮೊಂಗಾ ಅವರು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹಣ ಹೂಡಿದ್ದಾರೆ.
ಅಮೆರಿಕದ ಓಕ್ವುಡ್ ಶಾಲೆಯ 12-14 ವರ್ಷದ ಹುಡುಗಿಯರಿಗೆ ಈ ಸಿನಿಮಾ ನಿರ್ಮಾಣ ಮಾಡಲು ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿದ್ದರು. ಈ ಪೈಕಿ ನಿರ್ಮಾಪಕಿ ಗುನೀತ್ ಮೊಂಗ ಅವರು ಪ್ರಧಾನ ಪಾತ್ರ ವಹಿಸಿದರು. ಚಿತ್ರವು ಸಂಪೂರ್ಣ ಉತ್ತರ ಭಾರತದ ಕತೆಯನ್ನು ಆಧರಿಸಿದೆ. ಹಿಂದುಳಿದ ಪ್ರದೇಶಗಳಲ್ಲಿ ಋತುಸ್ರಾವದ ಸಮಯದಲ್ಲಿ ಬಟ್ಟೆ ಬಳಸುವುದು ಇನ್ನೂ ಆಚರಣೆಯಲ್ಲುಂಟು. ಅಂತ ಜಾಗದಲ್ಲಿ ಪ್ಯಾಡ್ ತಯಾರಿಸುವ ಮಷಿನ್ಗಳನ್ನು ಬಳಸಿ ಮಹಿಳೆಯರು ಹೇಗೆ ಸ್ಯಾನಿಟರಿ ಪ್ಯಾಡ್ಗಳನ್ನು ತಯಾರಿಸಿದರು. ಅದನ್ನು ಹೇಗೆ ಪ್ರಚಾರಕ್ಕೆ ತಂದರು ಎಂಬುದು ಈ ಸಿನಿಮಾದ ಕತೆ.
ಕೊಯಮತ್ತೂರು ಮೂಲದ ಅರುಣಾಚಲಂ ಮುರುಗನಂತಂ ಅವರು ಈ ಮಷಿನ್ಗಳ ಸೃಷ್ಟಿಕರ್ತ. ಕಳೆದ ವರ್ಷವಷ್ಟೆ ಅವರ ಜೀವನಾಧಾರಿತ ಸಿನಿಮಾ ಪ್ಯಾಡ್ ಮ್ಯಾನ್ ತೆರೆಕಂಡಿತ್ತು.