ರಿಯಲ್ ಸ್ಟಾರ್ ಉಪ್ಪಿ ಮತ್ತು ಆರ್.ಚಂದ್ರು ಕಾಂಬಿನೇಷನ್ನಲ್ಲಿ ಸಿದ್ಧವಾಗುತ್ತಿರುವ ಬಹು ನಿರೀಕ್ಷಿತ ಚಿತ್ರ ಕಬ್ಜ. ಈಗಗಲೇ ಚಿತ್ರವನ್ನು ಬಹು ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಉಪೇಂದ್ರೆ ಈ ಹಿಂದೆಯೇ ಹೇಳಿದ್ದರು. ಅಲ್ಲದೆ ಆಯಾ ಭಾಷೆಗಳ ಪೋಸ್ಟರ್ಗಳನ್ನು ರಿಲೀಸ್ ಮಾಡಿದ್ದರು. ಸದ್ಯ ಕಬ್ಜ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ಬಗ್ಗೆ ಕುತೂಹಲ ಮೂಡಿಸುವ ಫೋಟೋಗಳನ್ನು ಉಪ್ಪಿ ಶೇರ್ ಮಾಡಿದ್ದಾರೆ.
'ಗಂಧದಗುಡಿ'ಯಲ್ಲಿ ಅಣ್ಣಾವ್ರು ಬಳಸಿದ್ದ ಗನ್ ಬುದ್ಧಿವಂತನ ಕೈಯಲ್ಲಿ! - ಗಂಧದಗುಡಿ ಸಿನಿಮಾ
ಗಂಧದಗುಡಿ ಮತ್ತು ಶೋಲೆ ಚಿತ್ರಗಳಲ್ಲಿ ಬಳಸಿದ್ದ ಗನ್ಗಳನ್ನು ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಬಳಸಲಾಗಿದೆಯಂತೆ. ಈ ಬಗ್ಗೆ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಹೌದು, ಬೆಂಗಳೂರಿನ ಗನ್ ಹೌಸ್ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ಉಪೇಂದ್ರ ಗನ್ ಹಿಡಿದುಕೊಂಡಿರುವ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಣ್ಣಾವ್ರು, ಅಮಿತಾಬ್ ಬಚ್ಚನ್ ಸಾರ್ರಂತಹ ಮೇರು ನಟರು ಗಂಧದಗುಡಿ, ಶೋಲೆ ಚಿತ್ರಗಳಲ್ಲಿ ಬಳಸಿದಂತಹ ಪಿಸ್ತೂಲು ಕಬ್ಜ ಚಿತ್ರೀಕರಣದಲ್ಲಿ ಬಳಸಿದಾಗ ಆದ ರೋಮಾಂಚನ ಅವಿಸ್ಮರಣೀಯ ಎಂದು ಟ್ವೀಟ್ನಲ್ಲಿ ಉಪ್ಪಿ ಬರೆದಿದ್ದಾರೆ.
1973ರಲ್ಲಿ ತೆರೆ ಕಂಡಿದ್ದ ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಅಭಿನಯದ ಗಂಧದಗುಡಿ ಹಾಗೂ 1975ರಲ್ಲಿ ತೆರೆ ಕಂಡಿದ್ದ ಅಮಿತಾಬ್ ಬಚ್ಚನ್ ಅಭಿನಯದ ಶೋಲೆ ಚಿತ್ರದಲ್ಲಿ ಈ ಗನ್ಗಳನ್ನು ಬಳಸಲಾಗಿತ್ತಂತೆ.