ಶ್ರೀನಗರ (ಜಮ್ಮು-ಕಾಶ್ಮೀರ): ಹಲವಾರು ಸವಾಲುಗಳ ಹೊರತಾಗಿಯೂ ಕಾಶ್ಮೀರ ಕಣಿವೆಯ ಅನೇಕ ಸ್ಥಳೀಯ ಯುವಕರು ಚಲನಚಿತ್ರ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಡ್ಯಾನಿಶ್ ರೆಂಜೊ ಎಂಬ ಯುವಕ ಕಾಶ್ಮೀರ ಸಿನಿಮಾ ಶೂಟಿಂಗ್‌ಗೆ ಹೇಳಿಮಾಡಿಸಿದಂತೆ ಸ್ಥಳ ಎಂಬುದನ್ನು ಜಗತ್ತಿಗೆ ಸಾರಲು ಹೊರಟಿದ್ದು, ಈ ನಿಟ್ಟಿನಲ್ಲಿ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ.
ಡ್ಯಾನಿಶ್ ಪ್ರಸ್ತುತ ದಿ ಗುಡ್‌ನ್ಯೂಸ್ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಕಾಶ್ಮೀರ ಪಂಡಿತ್ ಕುಟುಂಬದ ಯುವತಿ ಹಾಗೂ ಮುಸ್ಲಿಂ ಯುವಕನ ನಡುವಿನ ಸ್ನೇಹದ ಕಥೆಯಾಗಿದೆ. ಕೋಮು, ಉದ್ವಿಗ್ನತೆಗೆ ಸಂಬಂಧಿಸಿದ ಸುದ್ದಿಗಳೇ ಸಾಮಾನ್ಯವಾಗಿರುವ ಇಲ್ಲಿ, ಸಿನಿಮಾ ಮೂಲಕ ಸಹೋದರತ್ವ ಹಾಗೂ ಸಾಮರಸ್ಯದ ಸಂದೇಶ ರವಾನಿಸಲು ರೆಂಜೊ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.
'ಈಟಿವಿ ಭಾರತ'ದೊಂದಿಗೆ ನಿರ್ಮಾಪಕ ಡ್ಯಾನಿಶ್ ರೆಂಜೊ, ದಿ ಗುಡ್ ನ್ಯೂಸ್ ಸಿನಿಮಾ ಕಾಶ್ಮೀರ ಹಾಗೂ ತನ್ನ ಪ್ರಯಾಣದ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ. ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿರುವ ಸಲೋನಿ ಖಾನಾ ಪಟೇಲ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ನಟನೆಯ ಮೇಲಿನ ಉತ್ಸಾಹದಿಂದ ವೃತ್ತಿಗೆ ಗುಡ್ ಬೈ ಹೇಳಿ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪಂಡಿತ್ ಹುಡುಗಿಯ ಪಾತ್ರವನ್ನು ಗೌರಿ ಬಾತ್ರಾ ನಿರ್ವಹಿಸಿದ್ದಾರೆ. ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಈಗಲೂ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಆದರೆ, ನಟನೆಯ ಮೇಲಿನ ಪ್ರೀತಿ ಆಕೆಯನ್ನು ಮುಂಬೈಗೆ ಕರೆದುಕೊಂಡು ಬಂದಿದೆ. ಈ ಇಬ್ಬರು ನಟಿಯರು ಇಲ್ಲಿಯವರೆಗೂ ಹಲವು ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರವನ್ನು ಶ್ರೀನಗರದಲ್ಲಿ ಚಿತ್ರೀಕರಿಸಲಾಗಿದ್ದು, ಸ್ಥಳೀಯರೊಂದಿಗೆ ಕೆಲಸ ಮಾಡಿದ್ದು, ಒಳ್ಳೆಯ ಅನುಭವ ಎಂದು ಡ್ಯಾನಿಶ್ ರೆಂಜೊ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಶೂಟಿಂಗ್ ಸ್ಥಳದಲ್ಲಿ ಬೈಕ್ ಡಿಕ್ಕಿ: ಗಾಯಗೊಂಡ ಬೆಂಗಾಲಿ ನಟಿ ಪ್ರಿಯಾಂಕಾ