ಪರಿಣಿತಿ ಚೋಪ್ರಾ ಅಭಿನಯದ ದಿ ಗರ್ಲ್ ಆನ್ ದಿ ಟ್ರೈನ್ ಟೀಸರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಇದೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಇದರ ಮೂಲಕ ಸಿನಿಮಾ ಮೇಲಿನ ಆಸಕ್ತಿ ಇನ್ನೂ ಹೆಚ್ಚಿಸಿದೆ. ಟ್ರೈಲರ್ನಲ್ಲಿ ಕೊಲೆ ರಹಸ್ಯದ ಬಗ್ಗೆ ಹೇಳಲಾಗಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.
'ದಿ ಗರ್ಲ್ ಆನ್ ದಿ ಟ್ರೈನ್' ಟ್ರೈಲರ್ ಔಟ್ - parineeti chopra the girl on the train trailer
ಪರಿಣಿತಿ ಚೋಪ್ರಾ ಅಭಿನಯದ ದಿ ಗರ್ಲ್ ಆನ್ ದಿ ಟ್ರೈನ್ ಟೀಸರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಇದೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

'ದಿ ಗರ್ಲ್ ಆನ್ ದಿ ಟ್ರೈನ್' ಟ್ರೈಲರ್ ಔಟ್
ದಿ ಗರ್ಲ್ ಆನ್ ದಿ ಟ್ರೈನ್ ಸಿನಿಮಾವು ಇದೇ ಫೆಬ್ರವರಿ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ದಂಪತಿ ವಿಚ್ಛೇದನ ಪಡೆಯುತ್ತಾರೆ. ಇದೇ ಕಥೆಯಲ್ಲಿ ಒಂದು ಕೊಲೆ ಕೂಡ ನಡೆಯುತ್ತದೆ. ಈ ಮಿಸ್ಟರಿಯಲ್ಲಿ ಮೀರಾ ಎಂಬ ಯುವತಿ ಹೇಗೆ ಸಿಲುಕಿಕೊಳ್ಳುತ್ತಾಳೆ. ಹಾಗೆ ಕೊಲೆಯ ರಹಸ್ಯ ಹೇಗೆ ಬಯಲಾಗುತ್ತದೆ ಎಂಬುದೇ ಸಿನಿಮಾದ ಕಥಾ ಹಂದರವಾಗಿದೆ.
ಈ ಸಿನಿಮಾವು 2016ರಲ್ಲಿ ತೆರೆ ಕಂಡಿದ್ದ ದಿ ಗರ್ಲ್ ಆನ್ ದಿ ಟ್ರೈನ್ನ ಅಧಿಕೃತ ರಿಮೇಕ್ ಆಗಿದೆ. ಈ ಸಿನಿಮಾಕ್ಕೆ ರಿಭು ದಾಸ್‌ಗುಪ್ತಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಟ ಎಮಿಲಿ ಬ್ಲಂಟ್ ಬಣ್ಣ ಹಚ್ಚಿದ್ದಾರೆ.