ಕರ್ನಾಟಕ

karnataka

ETV Bharat / sitara

ಕನ್ನಡ ಚಿತ್ರರಂಗದ ನೆಚ್ಚಿನ ಮೀಟಿಂಗ್ ತಾಣ ಗ್ರೀನ್​​ಹೌಸ್​ ಇನ್ನು ನೆನಪು ಮಾತ್ರ

ಎಷ್ಟೋ ವರ್ಷಗಳಿಂದ ಚಿತ್ರರಂಗದವರ ಮೆಚ್ಚಿನ ತಾಣವಾಗಿದ್ದ ಗಾಂಧಿನಗರದ ಗ್ರೀನ್​​ಹೌಸ್​​ ಇನ್ನು ನೆನಪು ಮಾತ್ರ. ಈ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದವರು ಇದರ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಗ್ರೀನ್​​ಹೌಸ್​

By

Published : Jul 31, 2019, 1:46 PM IST

ಕಳೆದ 30 ವರ್ಷಗಳಿಂದ ಸಿನಿಮಾ ಪತ್ರಿಕಾಗೋಷ್ಠಿಗಳಿಗೆ ಹಾಗೂ ಸಮಾರಂಭಗಳಿಗೆ ಸಾಕ್ಷಿಯಾಗಿದ್ದ ಗ್ರೀನ್​​ಹೌಸ್​​​​​​​​​​​​​​​​ ಇಂದು ಮುಗಿದ ಅಧ್ಯಾಯವಾಗಿದೆ. ಈ ಸ್ಥಳ ಗಾಂಧಿನಗರದ ತ್ರಿಭುವನ್ ಹಾಗೂ ಕೈಲಾಶ್ ಚಿತ್ರಮಂದಿರದ ಪಕ್ಕದ ಓಣಿಯಲ್ಲಿತ್ತು.

ವಾಸು

ಡಾ. ರಾಜ್​​​​​ಕುಮಾರ್ ಸಂಬಂಧಿಗಳಾದ ಶ್ರೀ ವಾಸು ಹಾಗೂ ಸಹೋದರರು ನಡೆಸಿಕೊಂಡು ಬಂದಿದ್ದ ಈ ಗ್ರೀನ್​​ಹೌಸ್ ಉದ್ಘಾಟನೆ ಮಾಡಿದ್ದೇ ಡಾ. ರಾಜ್​​​​​​​​​​​​​​​​​​ಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್. ಆರ್ಥಿಕ ಹೊಡೆತವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಬೇರೊಂದು ಸ್ಥಳದಲ್ಲಿ ‘ಗ್ರೀನ್​​ಹೌಸ್‘​ ಹೆಸರಿನಲ್ಲೇ ಮತ್ತೊಂದು ರೆಸ್ಟೋರೆಂಟ್ ತೆರೆಯಬೇಕು ಎಂಬುದು ವಾಸು ಅವರ ಆಸೆಯಂತೆ. ಗ್ರೀನ್ ಹೌಸ್ ಸಹೋದರರು ಎಂದೇ ಕರೆಸಿಕೊಳ್ಳುವ ವಾಸು, ರಾಮು, ಉಮೇಶ್, ಗೋವಿಂದರಾಜ್ ಹಾಗೂ ಲಿಂಗರಾಜ್ ಈ ಬಾರ್ ಹಾಗೂ ರೆಸ್ಟೋರೆಂಟ್​​​ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಿದ್ದಾರೆ. ಗ್ರೀನ್​​ಹೌಸ್​​​ನ ಕೆಳ ಅಂತಸ್ಥಿನ ಸ್ಥಳವೇ ಚಿತ್ರರಂಗದ ವ್ಯಕ್ತಿಗಳ ಜನಪ್ರಿಯ ಸ್ಥಳ. 2015 ನವೆಂಬರ್ ತಿಂಗಳಿನಲ್ಲಿ ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಂಡಿತ್ತು.

ಸುಧೀಂದ್ರ ವೆಂಕಟೇಶ್

2015 ರಲ್ಲೇ ಸುಮಾರು 1,500 ಸಿನಿಮಾ ಪತ್ರಿಕಾಗೋಷ್ಠಿಗಳು ಈ ಗ್ರೀನ್​​ಹೌಸ್​​ನಲ್ಲಿ ನಡೆದಿತ್ತು. ಕೇವಲ ಪತ್ರಿಕಾಗೋಷ್ಠಿ ಮಾತ್ರವಲ್ಲದೇ ಆಡಿಯೋ ಬಿಡುಗಡೆ, ಟೀಸರ್, ಟ್ರೇಲರ್ ಬಿಡುಗಡೆ, ಕಾರ್ಯಾಗಾರ, ‘ಮುಂಗಾರು ಮಳೆ' ಯಂತ ಯಶಸ್ಸು ಕಂಡ ಸಿನಿಮಾ ಮೀಟಿಂಗ್ ಹಾಗೂ ನೂರಾರು ಕಲಾವಿದರು ಈ ಗ್ರೀನ್​​​​​​​​​​ಹೌಸ್​​​ಗೆ ಬಂದು ತಮ್ಮನ್ನು ಪರಿಚಯ ಮಾಡಿಕೊಂಡಿರುವ ಉದಾಹರಣೆ ಇದೆ. ಇಂತಹ ಹಸಿರು ವಾತಾವರಣದಲ್ಲಿ ಕಾಲ ಕಳೆಯಲು ಹಾಗೂ ಕಾರ್ಯಕ್ರಮ ನಡೆಸಲು ಈ ಗ್ರೀನ್​ಹೌಸ್ ತವರು ಮನೆಯಿದ್ದಂತೆ ಎಂದು ಎಷ್ಟೋ ಕಲಾವಿದರು ಹೇಳಿದ್ದುಂಟು. ಈ ಸ್ಥಳದಲ್ಲಿ ಹೆಚ್ಚು ಸುದ್ದಿಗೋಷ್ಠಿ ನಡೆಸಿದ್ದು, ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರ ಶ್ರೀ ರಾಘವೇಂದ್ರ ಚಿತ್ರವಾಣಿ. ಈ ಸ್ಥಳ ಈಗ ಮುಚ್ಚುತ್ತಿರುವುದು ನೋವಿನ ಸಂಗತಿ ಎಂದು ಅವರೂ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details