ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪ್ರಮಾಣ ಸ್ವೀಕರಿಸಿದ್ದಾರೆ. ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗಣ್ಯರ ಜೊತೆ ಕುಳಿತಿದ್ದ ಅಮೆರಿಕ ಸೆನೆಟರ್ ಬರ್ನಿ ಸ್ಯಾಂಡರ್ಸ್ ಈಗ ವಿಶ್ವಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರು ಭಾರತಕ್ಕೂ ಬಂದು ಗಣ್ಯರನ್ನು ಭೇಟಿ ಮಾಡಿ ಅವರೊಂದಿಗೆ ಫೋಟೋ ಕೂಡಾ ತೆಗೆಸಿಕೊಳ್ಳುತ್ತಿದ್ದಾರೆ.
ಕರ್ನಾಟಕಕ್ಕೆ ಬಂದು ಸಂಸದೆ ಸುಮಲತಾ ಅಂಬರೀಶ್, ನಟಿ ಮೇಘನಾ ಗಾಂವ್ಕರ್ ಇಬ್ಬರನ್ನೂ ಭೇಟಿ ಮಾಡಿ ವಿದ್ಯಾರ್ಥಿಭವನಕ್ಕೆ ಹೋಗಿ ದೋಸೆ ತಿಂದು ಬಂದಿದ್ದಾರೆ. ಬಾಲಿವುಡ್ ನಟರಾದ ಸಿದ್ದಾರ್ಥ್ ಮಲ್ಹೋತ್ರ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಎಲ್ಲರನ್ನೂ ಭೇಟಿ ಮಾಡಿದ್ದಾರೆ. ಹೋಟೆಲ್, ಸಿನಿಮಾ ಥಿಯೇಟರ್, ರಸ್ತೆ ಬದಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿದೆ. ಅಷ್ಟೇ ಅಲ್ಲ, ಉಲ್ಲನ್ನಿಂದ ಮಾಡಿದ ಬರ್ನಿ ಸ್ಯಾಂಡರ್ಸ್ ಗೊಂಬೆಗಳು ಕೂಡಾ ಸೇಲ್ ಆಗುತ್ತಿದೆ.