ಮನೆಯಿಂದ ಹೊರ ಹೋಗಬೇಕು ಎಂದಾಗ ಕಣ್ಣೀರು ಹಾಕಿದ ಸದಸ್ಯರು ನಿಧಾನವಾಗಿ ವಾಸ್ತವತೆಗೆ ಮರಳಿದರು. ನಂತರ ಮನೆಯ ಎಲ್ಲಾ ಸದಸ್ಯರು ಒಬ್ಬರನ್ನೊಬ್ಬರು ಕಾಲೆಳೆದರು. ಹಾಡಿ, ಕುಣಿದು, ನಲಿದು ಸಂಭ್ರಮಿಸಿ ಭಾರವಾದ ಮನಸ್ಸಿನಿಂದ ನೆನಪುಗಳನ್ನು ಹೊತ್ತೊಯ್ದರು.
ಅಂತ್ಯವಾದ ಬಿಗ್ ಬಾಸ್ ಸೀಸನ್ 8 ಬಿಗ್ ಬಾಸ್ ಮನೆಯೊಳಗೆ ಕೊನೆಯದಾಗಿ ಬಂದವರು ಮೊದಲು ಹೋಗುವಂತೆ ಬಿಗ್ ಬಾಸ್ ಆದೇಶಿಸಿದರು. ಅದರಂತೆ ಪ್ರಿಯಾಂಕಾ, ಚಕ್ರವರ್ತಿ, ಪ್ರಶಾಂತ್ ಸಂಬರಗಿ, ರಘು, ದಿವ್ಯಾ ಸುರೇಶ್, ಮಂಜು, ಶಮಂತ್, ನಿಧಿ, ಅರವಿಂದ್, ವೈಷ್ಣವಿ ಕೊನೆಯದಾಗಿ ಶುಭಾ ಪೂಂಜಾ ಹೊರ ಹೋದರು.
ಓದಿ:ದಿವ್ಯಾ ಉರುಡುಗ ನನ್ನನ್ನು ಈಗಾಗಲೇ ಚೂಸ್ ಮಾಡಿಕೊಂಡಿದ್ದಾರೆ ಎಂದ ಬಿಗ್ಬಾಸ್ ಸ್ಪರ್ಧಿ
72ನೇ ದಿನಕ್ಕೆ ಬಿಗ್ ಬಾಸ್ ರದ್ದುಗೊಂಡಿದ್ದರೂ ಪ್ರೇಕ್ಷಕರ ಮನಸ್ಸು ಸೆಳೆದಿದೆ. ಮನೆಯ ಸ್ಪರ್ಧಿಗಳ ಉತ್ಸಾಹ, ಹಾಸ್ಯ, ತುಂಟಾಟ, ಜಗಳ, ಮತ್ತೆ ಒಂದಾಗುವ ಗುಣ ಎಲ್ಲರನ್ನೂ ಸೆಳೆದಿತ್ತು. ಅಲ್ಲದೇ, ರಾಜ್ಯದಲ್ಲಿ ಹೇರಲಾಗಿದ್ದ ಜನತಾ ಕರ್ಫ್ಯೂದಿಂದ ಮನೆ ಮಂದಿಯೆಲ್ಲಾ ಕುಳಿತು ನೋಡುತ್ತಿದ್ದ ಏಕೈಕ ಮನರಂಜನಾ ಕಾರ್ಯಕ್ರಮ ಇದಾಗಿತ್ತು.
ಅಂತ್ಯವಾದ ಬಿಗ್ ಬಾಸ್ ಸೀಸನ್ 8
ಬಿಗ್ ಬಾಸ್ ರದ್ದಾಗಿದ್ದು ಸ್ಪರ್ಧಿಗಳಿಗೆ, ನೂರಾರು ದಿನ ಕೆಲಸ ಮಾಡಿದ ತಂಡಕ್ಕೆ, ಟೆಕ್ನಿಷಿಯನ್ಗಳಿಗೆ ಬೇಸರವಾಗಿರುವಷ್ಟೇ ಪ್ರೇಕ್ಷಕರಿಗೂ ಬೇಸರವಾಗಿದೆ. ಒಟ್ಟಾರೆ ಸೀಸನ್ 8 ನೆನಪಾಗುವುದು ದಿವ್ಯಾ ಉರುಡುಗ ಮತ್ತು ಅರವಿಂದ್ ಜೋಡಿಯಿಂದಲೇ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಓದಿ:"ಕೊರೊನಾ ವೈರಸ್ ತಳಿಗಳನ್ನು ವೈಜ್ಞಾನಿಕ ಹೆಸರಿನಿಂದಲೇ ಗುರುತಿಸಬೇಕು, ದೇಶದ ಹೆಸರಿನಿಂದಲ್ಲ"