ಅನೂಪ್ ಭಂಡಾರಿ ನಿರ್ದೇಶನದ, ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಹೈದ್ರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಫ್ಯಾಂಟಮ್ ಲೋಕವನ್ನೇ ಸೃಷ್ಟಿಸಿರುವ ಚಿತ್ರತಂಡ ಭರ್ಜರಿಯಾಗಿ ಶೂಟಿಂಗ್ ಸಿದ್ದತೆ ಮಾಡುತ್ತಿದೆ.
ಪೈಲ್ವಾನ್ ನಂತರ ಮತ್ತೆ ಹುರಿ ಮೈ ಮಾಡಿಕೊಂಡ ಕಿಚ್ಚ... ಫ್ಯಾಂಟಮ್ ಕ್ಲೈಮ್ಯಾಕ್ಸ್ ಶೂಟಿಂಗ್ ಯಾವಾಗ? - Kannada actor Sudeep
ಫ್ಯಾಂಟಮ್ ಕೊನೆಯ ಹಂತದ ಚಿತ್ರೀಕರಣವನ್ನು ಡಿಸೆಂಬರ್ 4 ರಿಂದ ಶುರು ಮಾಡುವುದಾಗಿ ಸುದೀಪ್ ತಿಳಿಸಿದ್ದಾರೆ.
ಕೊನೆಯ ಹಂತದ ಚಿತ್ರೀಕರಣವನ್ನು ಡಿಸೆಂಬರ್ 4 ರಿಂದ ಶುರು ಮಾಡುವುದಾಗಿ ಸುದೀಪ್ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭರ್ಜರಿ ಮೈ ಕಟ್ಟು ಹೊಂದಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇದರ ಜೊತೆಗೆ, ಒಳ್ಳೆ ಊಟ, ಒಂಚೂರು ಶಿಸ್ತು ಕೆಟ್ಟದ್ದೇನಲ್ಲ ಎಂದು ಬರೆದಿದ್ದಾರೆ. ಬಹಳ ದಿನಗಳ ನಂತ್ರ ವರ್ಕೌಟ್ ಮಾಡಿದ್ದೇನೆ. ಫ್ಯಾಂಟಮ್ ಚಿತ್ರದ ಕೊನೆಯ ಹಂತದ ಚಿತ್ರವಿದು ಎಂದು ಫೋಟೋ ಹಾಕಿ ಅದರ ಬಗ್ಗೆ ಬರೆದಿದ್ದಾರೆ.
ಸಿನಿಮಾದಲ್ಲಿ ಕಿಚ್ಚ ವಿಕ್ರಾಂತ್ ರೋಣಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಲೀಡ್ ರೋಲ್ ಪ್ಲೇ ಮಾಡುತ್ತಿದ್ದಾರೆ.