ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿ ಯಾರು ಎಂದರೆ ಇಡೀ ಚಿತ್ರರಂಗ ಮತ್ತು ಪ್ರೇಕ್ಷಕರು ತೋರಿಸುವುದು ಡಾ. ರಾಜ್ಕುಮಾರ್ ಹಾಗೂ ಅವರ ಕುಟುಂಬವನ್ನು. ಡಾ. ರಾಜ್ಕುಮಾರ್ ಮತ್ತು ಅವರ ಮಕ್ಕಳಷ್ಟು ಬಹಳ ಸ್ನೇಹಮಯಿಗಳು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ವಿಚಾರದಲ್ಲಿ ಧ್ರುವ ಸರ್ಜಾ, ರಾಜ್ ಅವರ ಮಕ್ಕಳನ್ನೂ ಮೀರಿಸುತ್ತಾರಂತೆ.
ಧ್ರುವ ಸರ್ಜಾ ಬಗ್ಗೆ ಹಾಗೆ ಹೇಳಿದ್ದು ಬೇರೆ ಯಾರೂ ಅಲ್ಲ ಸ್ವತ: ರಾಘವೇಂದ್ರ ರಾಜಕುಮಾರ್. ಶಿವರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಬಹಳ ಸರಳ, ಸ್ನೇಹಮಯಿ ವ್ಯಕ್ತಿತ್ವದವರು ಎಂದುಕೊಂಡಿದ್ದೆ. ಆದರೆ, ಧ್ರುವ ಸರ್ಜಾ ಜೊತೆಗೆ ಕೆಲಸ ಮಾಡಿದ ನಂತರ ಧ್ರುವ, ಶಿವಣ್ಣ ಹಾಗೂ ಪುನೀತ್ ಇಬ್ಬರನ್ನೂ ಮೀರಿಸುತ್ತಾರೆ ಎಂಬ ಮಾತು ನನಗೆ ಅರ್ಥವಾಯ್ತು ಎನ್ನುತ್ತಾರೆ ರಾಘಣ್ಣ.ಧ್ರುವ ಸರ್ಜಾ ರಾಘಣ್ಣನ ಪುತ್ರನ ವಯಸ್ಸಿನವರಾದರೂ " ನಿಜಕ್ಕೂ ನೀವು ಚೆನ್ನಾಗಿ ಇರ್ತೀರ. ಇಡೀ ದೇಶವೇ ನಿಮ್ಮನ್ನು ತಿರುಗಿ ನೋಡುತ್ತದೆ" ಎಂದು ಹಾರೈಸಿದ್ದಾರೆ.