ದೇಶಾದ್ಯಂತ 40 ದಿನಗಳ ನಂತರ ‘ಎಣ್ಣೆ’ ಮಾರಾಟ ಶುರು ಆಗಿರುವ ಸಮಯದಲ್ಲಿ ಕನ್ನಡದ ತನಿಖೆ ಚಿತ್ರದ ಎಣ್ಣೆ ಹಾಡೊಂದು ಫೇಮಸ್ ಆಗಿದೆ. ಈ ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಆಗಿದೆ. 6 ಲಕ್ಷದ 12 ಸಾವಿರ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.
‘ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ....ಗೀತೆ ನವೀನ್ ಸಜ್ಜು ಅವರು ಹಾಡಿರುವುದು ಸಖತ್ ವೈರಲ್ ಆಗಿದೆ. ಇದೇ ಹಾಡು ಟಿಕ್ ಟಾಕ್ ನಲ್ಲೂ ಸಹ ಧೂಳೆಬ್ಬಿಸಿದೆ. ಜೀ ಮ್ಯೂಜಿಕ್ ಅಡಿಯಲ್ಲಿ ಈ ‘ತನಿಖೆ’ ಚಿತ್ರದ ಹಾಡುಗಳು ಬಿಡುಗಡೆ ಆಗಿದೆ.
‘ತನಿಖೆ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಪ್ಪಿಗೆ ಸಹ ನೀಡಿದ್ದು, ಮಾರ್ಚ್ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಲಾಕ್ಡೌನ್ ಹಿನ್ನೆಲಯಲ್ಲಿ ಜುಲೈ ಅಥವಾ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಕಲಿ ಗೌಡ ತಿಳಿಸಿದ್ದಾರೆ. ಕಲಿ ಸಿನಿಮಾಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.