ಸ್ಯಾಂಡಲ್ ವುಡ್ ನಲ್ಲಿ ನೈಜಘಟನೆ ಆಧಾರಿತ ಅದೇಷ್ಟೋ ಸಿನಿಮಾಗಳು ಬಂದಿವೆ. ಕೆಲವು ಮಾಸ್ ಸಿನಿಮಾಗಳಾದ್ರೆ ಇನ್ನು ಕೆಲವು ಕ್ಲಾಸ್ ಸಿನಿಮಾಗಳು ಬಂದಿವೆ. ಆದ್ರೆ ಇದೀಗ ಎಂಬತ್ತರ ದಶಕದಲ್ಲಿ ನಡೆದ ನೈಜ ಘಟನೆಯಾಧಾರಿಸಿ ಹೊಸಬರ ತಂಡವೊಂದು "ತನಿಖೆ" ಎಂಬ ಪಕ್ಕಾ ಮಾಸ್ ಕಮರ್ಷಿಯಲ್ ಚಿತ್ರ ರೆಡಿಮಾಡಿದ್ದಾರೆ. ಅಲ್ಲದೆ ಈಗಾಗಲೇ "ತನಿಖೆ" ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಪೊಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದು, ಗ್ಯಾಪ್ ನಲ್ಲಿ ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ.
ಸ್ಯಾಂಡಲ್ ವುಡ್ ನಲ್ಲಿ ಹೊಸ "ತನಿಖೆ" ಶುರು ಮಾಡಿದ ಹೊಸಬರ ತಂಡ - thanike
ಎಂಬತ್ತರ ದಶಕದಲ್ಲಿ ನಡೆದ ನೈಜ ಘಟನೆಯಾಧಾರಿಸಿ ಹೊಸಬರ ತಂಡವೊಂದು "ತನಿಖೆ" ಎಂಬ ಪಕ್ಕಾ ಮಾಸ್ ಕಮರ್ಷಿಯಲ್ ಚಿತ್ರ ರೆಡಿ ಮಾಡಿದ್ದಾರೆ. ಅಲ್ಲದೆ ಈಗಾಗಲೇ "ತನಿಖೆ" ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಪೊಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದು, ಗ್ಯಾಪ್ ನಲ್ಲಿ ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ.
![ಸ್ಯಾಂಡಲ್ ವುಡ್ ನಲ್ಲಿ ಹೊಸ "ತನಿಖೆ" ಶುರು ಮಾಡಿದ ಹೊಸಬರ ತಂಡ](https://etvbharatimages.akamaized.net/etvbharat/prod-images/768-512-4263960-thumbnail-3x2-chai.jpg)
ತುಂಬಾ ವರ್ಷಗಳ ಹಿಂದೆ ಗುಜ್ಜಾರ್ ಖಾನ್ "ತನಿಖೆ" ಟೈಟಲ್ ನಲ್ಲೆ ಚಿತ್ರ ಮಾಡಿದ್ರು. ಅಲ್ಲದೆ ಆ ಚಿತ್ರ ಗಾಂಧಿನಗರದಲ್ಲಿ ಸೌಂಡ್ ಮಾಡಿ ಗಮನ ಸೆಳೆದಿತ್ತು. ಈಗ ಮತ್ತೆ ಅದೇ ಟೈಟಲ್ ನಲ್ಲೇ ಸಿನಿಮಾ ಮಾಡಿದ್ದಾರೆ. ಆದ್ರೆ ಹಳೆಯ ತನಿಖೆಗೂ ನಮ್ಮ ತನಿಖೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ಚಿತ್ರತಂಡದ ಮಾತು. ವಿಶೇಷ ಅಂದ್ರೆ "ತನಿಖೆ" ಚಿತ್ರ ಕನಕಪುರದಲ್ಲಿ ಎಂಭತ್ತರ ದಶಕದಲ್ಲಿ ನಿರ್ದೇಶಕ ಜಿ.ಎಸ್ ಕಲಿಗೌಡ ಕಥೆಗೆ ಸ್ವಲ್ಪ ಮಸಾಲೆ ಸೇರಿಸಿ ಇಂದಿನ ಜನರೇಷನ್ಗೆ ಬೇಕಾದ ಸ್ಟೈಲ್ನಲ್ಲಿ ಕಥೆ , ಚಿತ್ರಕಥೆ, ಸಾಹಿತ್ಯ ಜೊತೆ ನಿರ್ದೇಶನ ಮಾಡಿರುವುದರ ಜೊತೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಇನ್ನು ಈ ಕಥೆಯನ್ನು ನಿರ್ದೇಶಕರಿಗೆ ಅವರ ಅಜ್ಜ ಹೇಳಿದ್ದು, ಅದನ್ನು ಸಿನಿಮಾ ರೂಪಕ್ಕೆ ತರುವಲ್ಲಿ ನಿರ್ದೇಶಕರ ಜೊತೆಗೆ ಅವರ ಸ್ನೇಹಿತರು ಕೈ ಜೋಡಿಸಿ ಕಲಿ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಚಿತ್ರದ ನಿರ್ಮಾಣಕ್ಕೆ ಕೈ ಜೋಡಿಸಿರುವ ಆರ್.ಡಿ ಅನಿಲ್ " ತನಖೆ" ಚಿತ್ರದಲ್ಲಿ ಲೀಡ್ ರೋಲ್ ಪ್ಲೇ ಮಾಡಿದ್ದಾರೆ.
ಚಿತ್ರದ ನಾಯಕನ ಪಾತ್ರ ನೆಗೆಟಿವ್ ಶೇಡ್ನಲ್ಲಿದ್ದು, ನಟ ಆರ್.ಡಿ ಅನಿಲ್ಗೆ ತನಿಖೆ ಚಿತ್ರ ನಾಯಕನಾಗಿ ನಟಿಸಿದ ಎರಡನೇ ಸಿನಿಮಾವಾಗಿದೆ. ಇನ್ನೂ ಚಿತ್ರದಲ್ಲಿ ನಾಯಕಿಯಾಗಿ ಹೊಸ ಹುಡುಗಿ ಚಂದನ ಈ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾಗ್ತಿದ್ದಾರೆ. ತನಿಖೆ ಚಿತ್ರದಲ್ಲಿ ಮೂರು ಹಾಡುಗಳಿದ್ದು ಕ್ರಿಸ್ಟೋಫರ್ ಲೀ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಸದ್ಯ "ತನಿಖೆ" ಚಿತ್ರ ಪೊಸ್ಟ್ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿ ಇದ್ದು ದಸರಾ ವೇಳೆಗೆ "ತನಿಖೆ" ಪೂರ್ಣಗೊಳಿಸಿ ಪ್ರೇಕ್ಷಕರ ರಿಸಲ್ಟ್ಗೆ ಕಾಯಲು ರೆಡಿಯಾಗಿದ್ದಾರೆ.