ಯುವ ಸಾಮ್ರಾಟ್ ನಮ್ಮನ್ನು ಅಗಲಿ ಇಂದಿಗೆ 5ನೇ ದಿನ. ಇನ್ನು ಚಿರಂಜೀವಿ ಸರ್ಜಾ ಅವರ ವಯಸ್ಸು 39 ಎಂದು ತಪ್ಪು ತಿಳಿಯಲಾಗಿತ್ತು. ಆದರೆ ಅವರು 1985 ರಲ್ಲಿ ಜನಿಸಿದ್ದು ಅವರ ವಯಸ್ಸು 35 ಎಂದು ಸ್ನೇಹಿತ ಪನ್ನಗಾಭರಣ ಅವರು ಸ್ಪಷ್ಟನೆ ನೀಡಿದ್ದಾರೆ.
ಆ ಡೈಲಾಗ್ನಂತೆ ಚಿರು ಜೀವನ ಅರ್ಧಕ್ಕೆ ಮುಗಿಯಿತು..ಮರುಕ ಪಟ್ಟ ದಳಪತಿ ವಿಜಯ್ - Chiranjeevi sarja death
ಭಾನುವಾರ ಹೃದಯಾಘಾತದಿಂದ ನಿಧನರಾದ ಚಿರಂಜೀವಿ ಸರ್ಜಾ ಅವರನ್ನು ನೆನೆದು ತಮಿಳು ನಟ ದಳಪತಿ ವಿಜಯ್ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಸಿನಿಮಾದ 'ಲೈಫ್ ಇಸ್ ವೆರಿ ಶಾರ್ಟ್ ನಿಂಬಾ' ಎಂಬ ಡೈಲಾಗ್ನಂತೆ ಚಿರು ಜೀವನ ಕೂಡಾ ಅರ್ಧಕ್ಕೆ ಮುಗಿಯಿತಲ್ಲಾ ಎಂದು ವಿಜಯ್ ಕಂಬನಿ ಮಿಡಿದಿದ್ದಾರೆ.
ಚಿರಂಜೀವಿ ಸರ್ಜಾ ಅವರು ನಿಧನರಾದ ವಿಚಾರ ಇತರ ಭಾಷೆಗಳ ನ್ಯೂಸ್ ಚಾನಲ್ಗಳಲ್ಲೂ ಪ್ರಸಾರವಾಗಿತ್ತು. ಚಿರು ಅಗಲಿಕೆಗೆ ತಮಿಳು, ತೆಲುಗು ನಟರು ಕೂಡಾ ಬೇಸರ ವ್ಯಕ್ತಪಡಿಸಿದ್ದರು. ತಮಿಳು ನಟ ತಳಪತಿ ವಿಜಯ್ ಕೂಡಾ ಚಿರು ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ್ದರು. ಚಿರಂಜೀವಿ ಸರ್ಜಾ ಟಿಕ್ಟಾಕ್ನಲ್ಲಿ ಕೂಡಾ ಆ್ಯಕ್ಟಿವ್ ಇದ್ದು ವಿಜಯ್ ಅವರ 'ಮಾಸ್ಟರ್' ಸಿನಿಮಾದ ಡೈಲಾಗ್ಗೆ ಟಿಕ್ಟಾಕ್ ಮಾಡಿದ್ದರು.
ಚಿರಂಜೀವಿ ಸರ್ಜಾ ಅವರು ತಮಿಳು ಸಿನಿಮಾಗಳನ್ನು ಕೂಡಾ ನೋಡುತ್ತಿದ್ದರು. ಅವರಿಗೆ ವಿಜಯ್ ಎಂದರೆ ಬಹಳ ಇಷ್ಟ. 'ಮಾಸ್ಟರ್' ಚಿತ್ರದ ಕುಟ್ಟಿ ಸ್ಟೋರಿ ಎಂಬ ಹಾಡಿನಲ್ಲಿ ಬರುವ 'ಲೈಫ್ ಇಸ್ ವೆರಿ ಶಾರ್ಟ್ ನಿಂಬಾ' ಎಂಬ ಡೈಲಾಗ್ಗೆ ಕೂಡಾ ಚಿರು ಟಿಕ್ಟಾಕ್ ಮಾಡಿದ್ದರು. ಚಿರು ನಿಧನರಾಗುತ್ತಿದ್ದಂತೆ ಈ ಟಿಕ್ಟಾಕ್ ವೈರಲ್ ಆಗಿದೆ. ಈ ಟಿಕ್ಟಾಕ್ ನೋಡಿ ಬೇಸರ ವ್ಯಕ್ತಪಡಿಸಿರುವ ವಿಜಯ್, ಈ ಡೈಲಾಗ್ನಂತೆ ಚಿರಂಜೀವಿ ಸರ್ಜಾ ಜೀವನ ಕೂಡಾ ಆಯ್ತಲ್ಲಾ ಎಂದು ಮರುಕಪಟ್ಟಿದ್ದಾರೆ.