ಕರ್ನಾಟಕ

karnataka

ETV Bharat / sitara

ಕನ್ನಡದಲ್ಲೂ ಬಿಡುಗಡೆಯಾಗ್ತಿದೆ ಜಯಲಲಿತಾ ಬಯೋಪಿಕ್​​​​ 'ತಲೈವಿ' - Jayalalitha Biopic Thalaivi

ವಿಜಯ್ ನಿರ್ದೇಶನದಲ್ಲಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ತಮಿಳುನಾಡು ಮಾಜಿ ಸಿಎಂ, ದಿವಂಗತ ಜಯಲಲಿತಾ ಬಯೋಪಿಕ್ 'ತಲೈವಿ' ಕನ್ನಡದಲ್ಲಿ ತಯಾರಾಗುತ್ತಿದೆ. ಡಬ್ಬಿಂಗ್ ಕಾರ್ಯಗಳು ನಡೆಯುತ್ತಿದ್ದು ಶೀಘ್ರವೇ ಸಿನಿಮಾ ಬಿಡುಗಡೆಯಾಗಲಿದೆ.

Thalaivi movie  is dubbing to Kannada
'ತಲೈವಿ'

By

Published : Jun 13, 2020, 10:16 AM IST

ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು ಮುಖ್ಯಮಂತ್ರಿ ಆಗಿ ಐರನ್ ಲೇಡಿ ಎಂದೇ ಹೆಸರು ಪಡೆದ ದಿವಂಗತ ಜಯಲಲಿತಾ ಅವರ ಬಗ್ಗೆ ಸಿನಿಮಾಗಳು ತಯಾರಾಗುತ್ತಿವೆ. ತಮಿಳುನಾಡಿನಲ್ಲಿ ಅಮ್ಮ ಎಂದೇ ಹೆಸರಾಗಿದ್ದ ಜಯಲಲಿತಾ ಅವರು ನಿಧನರಾಗಿ 4 ವರ್ಷಗಳು ಕಳೆಯುತ್ತಾ ಬರುತ್ತಿದೆ.

ಕನ್ನಡಕ್ಕೆ ಡಬ್ ಆಗುತ್ತಿದೆ 'ತಲೈವಿ'

ಜಯಲಲಿತಾ ಅವರ ಹೆಸರಿನಲ್ಲಿ 'ತಲೈವಿ' ಎಂಬ ಸಿನಿಮಾ ತಯಾರಾಗಿರುವುದು ತಿಳಿದ ವಿಚಾರ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್​​​​​ನಿಂದಲೇ ಎಲ್ಲರ ಗಮನ ಸೆಳೆದಿರುವ ಈ ಸಿನಿಮಾ ಇದೀಗ ಕನ್ನಡದಲ್ಲೂ ಬರಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ಸಿನಿಮಾ ಅನೇಕ ಕಾರಣಗಳಿಂದ ಸದ್ದು ಮಾಡುತ್ತಿದೆ. ಸಿನಿಮಾ ಕೊರೊನಾ ಎಫೆಕ್ಟ್​​​​​​ನಿಂದಾಗಿ ಥಿಯೇಟರ್​​​​ಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಅಮೆಜಾನ್ ಪ್ರೈಂ ಹಾಗೂ ನೆಟ್​​​​ಫ್ಲಿಕ್ಸ್​​​ನಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 55 ಕೋಟಿ ರೂಪಾಯಿಗೆ ಸಿನಿಮಾ ಒಟಿಟಿ ಪ್ಲಾಟ್​​​ಫಾರ್ಮ್​ಗೆ ಮಾರಾಟವಾಗಿದೆ.

'ತಲೈವಿ'

'ತಲೈವಿ' ಸಿನಿಮಾ ಒಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ಬಿಡುಗಡೆ ಆಗುತ್ತಿರುವುದಕ್ಕೆ ಚಿತ್ರ ಪ್ರದರ್ಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸಿನಿಮಾವನ್ನು ಕನ್ನಡಕ್ಕೆ ಡಬ್​ ಮಾಡಿ ಬಿಡುಗಡೆ ಮಾಡಲು ಚಿತ್ರದ ನಿರ್ದೇಶಕ ವಿಜಯ್ ಪ್ಲ್ಯಾನ್​​​ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳ ದರ್ಬಾರ್ ಜೋರಾಗಿದೆ. ತಮಿಳು ನಟ ಅಜಿತ್ ಅಭಿನಯದ 'ವಿಶ್ವಾಸಂ', 'ಆರಂಭಂ', ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈ ರಾ ನರಸಿಂಹ ರೆಡ್ಡಿ' ಮತ್ತು ರಶ್ಮಿಕಾ ಅಭಿನಯದ 'ಡಿಯರ್ ಕಾಮ್ರೇಡ್' ಸಿನಿಮಾಗಳು ಕನ್ನಡಕ್ಕೆ ಡಬ್​​​​​​​​​​​​​ ಆಗಿ ತೆರೆ ಕಂಡಿದ್ದವು. ಈ ಹಿನ್ನೆಲೆಯಲ್ಲಿ 'ತಲೈವಿ' ಸಿನಿಮಾದ ಡಬ್ಬಿಂಗ್ ಕಾರ್ಯ ಕೂಡಾ ನಡೆಯುತ್ತಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ 'ತಲೈವಿ' ಚಿತ್ರವನ್ನು ಕನ್ನಡದಲ್ಲಿ ನೋಡಬಹುದು.

ಜಯಲಲಿತಾ ಬಯೋಪಿಕ್​​​​ 'ತಲೈವಿ'

ABOUT THE AUTHOR

...view details