ಕರ್ನಾಟಕ

karnataka

ETV Bharat / sitara

ತೆಲುಗು ಸಿನಿಮಾ ಕ್ಷೇತ್ರದ ನಿಯೋಗದಿಂದ ಆಂಧ್ರ ಸಿಎಂ ಜಗನ್‌ ಭೇಟಿ.. - ಶೂಟಿಂಗ್‌

ಹಿರಿಯ ನಟ ಚಿರಂಜೀವಿ ನೇತೃತ್ವದ ತಂಡದಲ್ಲಿ ನಟ ನಾಗಾರ್ಜುನ, ನಿರ್ಮಾಪಕರಾದ ಸಿ.ಕಲ್ಯಾಣ್‌, ಸುರೇಶ್‌ಬಾಬು, ದಿಲ್‌ ರಾಜು, ಪಟ್ಲೂರಿ ವರಪ್ರಸಾದ್‌ ಹಾಗೂ ನಿರ್ದೇಶಕರಾದ ರಾಜಮೌಳಿ, ತ್ರಿವಿಕ್ರಮ್‌ ಶ್ರೀನಿವಾಸ್‌ ಉಪಸ್ಥಿತರಿದ್ದರು.

TFI Members to meet andra cm to discuss film shooting amid covid-19
ತೆಲುಗು ಸಿನಿಮಾ ಕ್ಷೇತ್ರದ ನಿಯೋಗದಿಂದ ಆಂಧ್ರ ಸಿಎಂ ಜಗನ್‌ ಭೇಟಿ

By

Published : Jun 9, 2020, 4:24 PM IST

ಅಮರಾವತಿ (ಆಂಧ್ರಪ್ರದೇಶ): ತೆಲಂಗಾಣದಲ್ಲಿ ಸಿನಿಮಾ, ಧಾರವಾಹಿಗಳ ಶೂಟಿಂಗ್‌ಗೆ‌ ಸಿಎಂ ಕೆ.ಚಂದ್ರಶೇಖರ್‌ ರಾವ್‌ ಅನುಮತಿ ನೀಡಿದ ಬೆನ್ನಲ್ಲೇ ತೆಲುಗು ಸಿನಿಮಾ ಇಂಡಸ್ಟ್ರಿಯ ಪದಾಧಿಕಾರಿಗಳು ಮತ್ತು ಹಿರಿಯ ನಟರು, ನಿರ್ಮಾಪಕರು ಇಂದು ಆಂಧ್ರ ಸಿಎಂ ಜನಗ್‌ ಮೋಹನ್‌ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ.

ಅಮರಾವತಿ ಸಮೀಪದ ತಾಡಪಲ್ಲಿಯಲ್ಲಿನ ಸಿಎಂ ಕಾರ್ಯಾಲಯಕ್ಕೆ ಆಗಮಿಸಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರೊಂದಿಗೆ ತೆಲಗು ಸಿನಿಮಾ ಕ್ಷೇತ್ರದ ಅಭಿವೃದ್ಧಿ ಹಾಗೂ ಇತರೆ ಸಮಸ್ಯೆಗಳ ಪರಿಹಾರ ಸಂಬಂಧ ಮಾತುಕತೆ ನಡೆಸಿದ್ದಾರೆ. ಸಿನಿಮಾ ಶೂಟಿಂಗ್‌ಗೆ ಅವಕಾಶ ನೀಡುವ ಸಂಬಂಧ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹಿರಿಯ ನಟ ಚಿರಂಜೀವಿ ನೇತೃತ್ವದ ತಂಡದಲ್ಲಿ ನಟ ನಾಗಾರ್ಜುನ, ನಿರ್ಮಾಪಕರಾದ ಸಿ.ಕಲ್ಯಾಣ್‌, ಸುರೇಶ್‌ಬಾಬು, ದಿಲ್‌ ರಾಜು, ಪಟ್ಲೂರಿ ವರಪ್ರಸಾದ್‌ ಹಾಗೂ ನಿರ್ದೇಶಕರಾದ ರಾಜಮೌಳಿ, ತ್ರಿವಿಕ್ರಮ್‌ ಶ್ರೀನಿವಾಸ್‌ ಉಪಸ್ಥಿತರಿದ್ದರು.

ABOUT THE AUTHOR

...view details