ಇಂದು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಟರಲ್ಲಿ ಒಬ್ಬರಾದ ವಿಷ್ಣುವರ್ಧನ್ಗೆ ಅವರ 71ನೇ ಜನ್ಮದಿನ. ಸ್ಯಾಂಡಲ್ವುಡ್ನಲ್ಲಿ ಸಾಹಸ ಸಿಂಹ ಎಂದೇ ಖ್ಯಾತರಾಗಿದ್ದ ವಿಷ್ಣು ನಮ್ಮನೆಲ್ಲಾ ಅಗಲಿ 12 ವರ್ಷಗಳು ಕಳೆಯುತ್ತಿವೆ. ಆದರೂ ಇಂದಿಗೂ ಕನ್ನಡಿಗರ ಮನದಲ್ಲಿ ನೆಚ್ಚಿನ ಯಜಮಾನನಾಗಿ ಉಳಿದುಕೊಂಡಿದ್ದಾರೆ.ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಡಾ.ವಿಷ್ಣುವರ್ಧನ್ ನಟಿಸಿ ಅಧಿಕ ಸಂಖ್ಯೆ ಅಭಿಮಾನಿಗಳನ್ನು ಪಡೆದಿದ್ದರು.
ಸೆಪ್ಟೆಂಬರ್ 18, ಶನಿವಾರ ಸ್ಯಾಂಡಲ್ವುಡ್ ಮೋಸ್ಟ್ ಎನರ್ಜಿಟಿಕ್ ಅ್ಯಂಡ್ ಕ್ರಿಯೇಟಿವ್ ಮ್ಯಾನ್ ಎಂದೆ ಖ್ಯಾತರಾದ ವಿಷ್ಣುವರ್ಧನ್ ಹುಟ್ಟುಹಬ್ಬ. ಇನ್ನು ಅವರ ಬಗ್ಗೆ ಅಭಿಮಾನಿಗಳು ತಿಳಿದುಕೊಳ್ಳಲೇ ಬೇಕಾದ ಹತ್ತು 10 ವಿಚಾರಗಳಿವು.
ವಿಷ್ಣುವರ್ಧನ್ ನಿಜವಾದ ಹೆಸರು ಸಂಪತ್ ಕುಮಾರ್ , ನಾಗರಹಾವು ಚಿತ್ರೀಕರಣದ ವೇಳೆ ನಿರ್ದೇಶಕ ಪುಟ್ಟಣ್ಣ ಕಣಗಲ್ ವಿಷ್ಣುವರ್ಧನ್ ಎಂದು ನಾಮಕರಣ ಮಾಡಿದ್ದರು.
ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಂಡಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ವಿಷ್ಣುವರ್ಧನ್ ಚೊಚ್ಚಲ ಬಾರಿಗೆ ಅಭಿನಯದ ನಾಗರಹಾವು ಸಿನಿಮಾ 5 ಜಿಲ್ಲೆಗಳಲ್ಲಿ ಶತ ದಿನ ಪೂರೈಸಿತ್ತು.
ಸಾಹಸ ಸಿಂಹ ವಿಷ್ಣುವರ್ಧನ್ ಕನ್ನಡ,ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆ ಸೇರಿದಂತೆ 220ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಪ್ರತಿಷ್ಠಿತ ಸಿಎಸ್ಎಸ್, ಐಬಿಎನ್ ಚಾನಲ್ 2008ರಲ್ಲಿ ಮೋಸ್ಟ್ ಪಾಪ್ಯೂಲರ್ ಕನ್ನಡ ನಟ ಎಂದು ಬಿರುದು ನೀಡಿ ಗೌರವಿಸಿವೆ.
ಕನ್ನಡ ಚಿತ್ರರಂಗದಲ್ಲಿ 14ಕ್ಕೂ ಹೆಚ್ಚು ಚಿತ್ರಗಳಲ್ಲಿ ದ್ವಿ ಪಾತ್ರದಲ್ಲಿ ನಟಿಸಿರುವ ಏಕೈಕ ನಟ ಅಂದರೆ ಡಾ ವಿಷ್ಣುವರ್ಧನ್ ಅನ್ನೋದು ಹೆಮ್ಮೆಯ ವಿಷಯ.