ಕರ್ನಾಟಕ

karnataka

ETV Bharat / sitara

ಪವನ್ ಕಲ್ಯಾಣ್ ಜೊತೆ ಸುದೀಪ್ ನಟನೆ...ಚಿತ್ರತಂಡ ನೀಡಿದ ಸ್ಪಷ್ಟನೆ ಏನು..? - Sudeep not acting with Pawan Kalyan

'ಅಯ್ಯಪ್ಪನುಂ ಕೋಶಿಯುಂ' ಚಿತ್ರದಲ್ಲಿ ಪವನ್​ ಕಲ್ಯಾಣ್ ಜೊತೆ ಸುದೀಪ್ ನಟಿಸುತ್ತಿಲ್ಲ ಎನ್ನಲಾಗಿದೆ. ಈ ಚಿತ್ರದ ತೆಲುಗು ರೀಮೇಕ್​​ನಲ್ಲಿ ಎರಡನೇ ಹೀರೋ ಪಾತ್ರವನ್ನು ಸಂಪೂರ್ಣ ಬದಲಿಸಲಾಗಿದ್ದು ಪವನ್ ಮಾತ್ರ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

Sudeep not acting with Pawan Kalyan
'ಅಯ್ಯಪ್ಪನುಂ ಕೋಶಿಯುಂ'

By

Published : Nov 17, 2020, 9:07 AM IST

'ಫ್ಯಾಂಟಮ್' ಚಿತ್ರೀಕರಣಕ್ಕಾಗಿ ಹೈದರಾಬಾದ್​​ಗೆ ತೆರಳಿದ್ದ ಸುದೀಪ್ ಬಿಡುವಿನ ಸಮಯದಲ್ಲಿ ತೆಲುಗು ಪವರ್ ಸ್ಟಾರ್ ಪವನ್​ ಕಲ್ಯಾಣ್ ಅವರನ್ನು ಭೇಟಿ ಮಾಡಿ ಬಂದಿದ್ದರು. ಪವನ್ ಕಲ್ಯಾಣ್ ಜೊತೆ ಸುದೀಪ್ ನಟಿಸುತ್ತಿದ್ದಾರೆ, ಅದಕ್ಕಾಗಿ ಈ ಭೇಟಿ ಎನ್ನಲಾಗಿತ್ತು. ಆದರೆ ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ದೊರೆತಿದೆ.

ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲಾಗುತ್ತಿದ್ದು ಇದರಲ್ಲಿ ಅಯ್ಯಪ್ಪನ ಪಾತ್ರವನ್ನು ಪವನ್ ಕಲ್ಯಾಣ್ ಮಾಡುತ್ತಿದ್ದು ಕೋಶಿ ಪಾತ್ರಕ್ಕೆ ಸುದೀಪ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ ಸುದೀಪ್ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ವಿಚಾರ ಹೊರಬಿದ್ದಿದೆ. ತೆಲುಗು ರೀಮೇಕ್​​​ನಲ್ಲಿ ಆ ಪಾತ್ರವನ್ನೇ ತೆಗೆಯಲಾಗಿದೆಯಂತೆ. ಅಯ್ಯಪ್ಪನುಂ ಕೋಶಿಯುಂ ತೆಲುಗು ರೀಮೇಕ್‍ನಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದ್ದು, ಇಲ್ಲಿ ಮತ್ತೊಬ್ಬ ಹೀರೋ ಇರುವುದಿಲ್ಲವಂತೆ. ಕೇವಲ ಪವನ್ ಕಲ್ಯಾಣ್ ಮಾತ್ರ ಪ್ರಮುಖ ಪಾತ್ರ ಮಾಡಲಿದ್ದು, ಇನ್ನೊಂದು ಪಾತ್ರವನ್ನು ಸಂಪೂರ್ಣ ನೆಗೆಟಿವ್ ಪಾತ್ರವನ್ನಾಗಿ ಬದಲಾಯಿಸಲಾಗಿದೆಯಂತೆ. ಇನ್ನು ಚಿತ್ರದ ಕ್ಲೈಮ್ಯಾಕ್ಸ್​​​​​​ನಲ್ಲಿ ಕೂಡಾ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಒಟ್ಟಾರೆ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗುವಂತೆ ಚಿತ್ರಕಥೆಯನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ.

ತೆಲುಗು ರೀಮೇಕ್‍ಗೆ ಇನ್ನೂ ಹೆಸರು ಫೈನಲ್ ಮಾಡಿಲ್ಲ. ನಾಗವಂಶಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಸಾಗರ್ ಚಂದ್ರ ನಿರ್ದೇಶಿಸುತ್ತಿದ್ದಾರೆ. ಪವನ್ ಕಲ್ಯಾಣ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್, ಈ ಚಿತ್ರಕ್ಕೆ ಸಂಭಾಷಣೆಗಳನ್ನು ಬರೆಯುತ್ತಿದ್ದಾರಂತೆ. ಖ್ಯಾತ ನಟಿ ಸಾಯಿಪಲ್ಲವಿ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ಪವನ್ ಕಲ್ಯಾಣ್, 'ವಕೀಲ್ ಸಾಬ್' ಚಿತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾ ನಂತರ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ABOUT THE AUTHOR

...view details