ಕರ್ನಾಟಕ

karnataka

ETV Bharat / sitara

ಮಂಡಿಯೂರಿ ವಿಷ್ಣುವರ್ಧನ್‌ ಕ್ಷಮೆ ಕೇಳಿದ ವಿಜಯ್‌ ರಂಗರಾಜು: ಅನಿರುದ್ಧ್‌ ಹೇಳಿದ್ದೇನು? - ತೆಲುಗು ನಟ ವಿಜಯ್​ ರಂಗರಾಜು

ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ಮಂಡಿಯೂರಿ ಕ್ಷಮೆ ಕೇಳಿದ್ದಾರೆ.

Telugu actor Vijay Rangaraju has apologized to Vishnuvardhan
ಕೊನೆಗೂ ವಿಷ್ಣುಗೆ ಕ್ಷಮೆ ಕೇಳಿದ ತೆಲುಗು ನಟ : ಅನಿರುದ್ಧ್​ ಹೇಳಿದ್ದೇನು?

By

Published : Dec 13, 2020, 3:45 PM IST

Updated : Dec 13, 2020, 4:11 PM IST

ಕನ್ನಡದ ಜನಪ್ರಿಯ ಹಿರಿಯ ನಟ ದಿ. ವಿಷ್ಣುವರ್ಧನ್ ಬಗ್ಗೆ ಕೀಳಾಗಿ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ಮಂಡಿಯೂರಿ, ಕಣ್ಣೀರು ಹಾಕಿ ಕ್ಷಮೆ ಕೇಳಿದ್ದಾರೆ.

ಈ ನಟನ ಹೇಳಿಕೆಯ ವಿರುದ್ಧ ಪುನೀತ್ ರಾಜ್‌ಕುಮಾರ್, ಸುದೀಪ್, ಯಶ್, ಜಗ್ಗೇಶ್, ಉಪೇಂದ್ರ, ಗಣೇಶ್, ರಕ್ಷಿತ್ ಶೆಟ್ಟಿ, ಧನಂಜಯ್ ಸೇರಿದಂತೆ ಹಲವು ಖ್ಯಾತ ಕನ್ನಡದ ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಕ್ಷಮಾಪಣೆಗೆ ಆಗ್ರಹಿಸಿದ್ದರು.

ಇಂದು ವಿಡಿಯೋ ಮಾಡಿರುವ ವಿಜಯ್‌ ರಂಗರಾಜು, 'ನಾನು ಮಾಡಿದ್ದು ತಪ್ಪಾಯಿತು' ಎಂದು ಕಣ್ಣೀರು ಹಾಕುತ್ತ ಮಂಡಿಯೂರಿ ಕ್ಷಮೆ ಕೇಳಿದ್ದಾರೆ. ತೆಲುಗು ನಟ ಕ್ಷಮೆ ಕೇಳಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಓದಿ : ತೆಲುಗು ನಟ ವಿಜಯ್ ರಂಗರಾಜು ಕ್ಷಮೆ ಕೇಳಲೇಬೇಕು: ಪುನೀತ್​​

ವಿಡಿಯೋದಲ್ಲೇನಿದೆ?

'ನನಗೆ ತಪ್ಪಿನ ಅರಿವಾಗಿದೆ. ನನ್ನ ತಪ್ಪಿಗೆ ಶಿಕ್ಷೆಯನ್ನೂ ಅನುಭವಿಸುತ್ತಿದ್ದೇನೆ. ನನಗೆ ಕೊರೊನಾ ಬಂದಿದೆ. ನಾನು ವಿಷ್ಣುವರ್ಧನ್ ಬಗ್ಗೆ ಹಾಗೆ ಮಾತನಾಡಬಾರದಿತ್ತು, ನನ್ನನ್ನು ಕ್ಷಮಿಸಿಬಿಡಿ. ನಾನು ವಿಷ್ಣುವರ್ಧನ್ ಬಗ್ಗೆ ಹೇಳಿದ್ದು ಸುಳ್ಳು' ಎಂದು ತೆಲುಗಿನಲ್ಲಿ ಹೇಳಿದ್ದಾರೆ.

ಓದಿ : ’’ಬದುಕಿದ್ದಾಗ ಅವರ ಬಗ್ಗೆ ಮಾತನಾಡುವುದು ಗಂಡಸ್ತನ’’: ತೆಲುಗು ನಟನಿಗೆ ಕಿಚ್ಚ ವಾರ್ನ್​​​​

'ನಾನು ಸಂದರ್ಶನದಲ್ಲಿ ಹೇಳಿರುವಂತೆ ಸೆಟ್‌ನಲ್ಲಿ ಹೇಳಿದ್ದರೆ ಯೂನಿಟ್‌ನವರೇ ನನ್ನನ್ನು ಸಾಯಿಸಿಬಿಡುತ್ತಿದ್ದರು' ಎಂದು ಹೇಳುತ್ತಾ ವಿಜಯ್​​ ರಂಗರಾಜು ಮಂಡಿಯೂರಿ, ತಲೆಯನ್ನು ನೆಲಕ್ಕೆ ಬಾಗಿಸಿ ಕ್ಷಮೆ ಕೇಳಿದ್ದಾರೆ.

ಅನಿರುದ್ಧ್‌ ಪ್ರತಿಕ್ರಿಯೆ:

ನಟ ಅನಿರುದ್ಧ್​​ ಫೇಸ್‌​ಬುಕ್​​ನಲ್ಲಿ ವಿಡಿಯೋ ಒಂದನ್ನು ಹಾಕಿದ್ದು, 'ವಿಜಯ್​​ ರಂಗರಾಜು ತಪ್ಪಿಗೆ ಕ್ಷಮೆ ಕೇಳಿದ್ದಾರೆ. ದಿಗ್ಗಜರು, ಹಿರಿಯರ ಬಗ್ಗೆ ಈ ರೀತಿ ಕೀಳಾಗಿ ಮಾತನಾಡಬಾರದು ಎಂಬುದು ಈ ರೀತಿ ಮಾನಸಿಕತೆ ಇರುವ ವ್ಯಕ್ತಿಗಳಿಗೆ ಅರಿವಾಗಿದೆ. ಇದಕ್ಕೆ ಕಾರಣಕರ್ತರಾಗಿರುವ ತಮಗೆಲ್ಲರಿಗೂ, ನಟರಿಗೆ, ಅಭಿಮಾನಿಗಳಿಗೆ ಧನ್ಯವಾದಗಳು' ಎಂದು ವಿಡಿಯೋ ಹಾಕಿದ್ದಾರೆ.

Last Updated : Dec 13, 2020, 4:11 PM IST

ABOUT THE AUTHOR

...view details