ಕಿರುತೆರೆ ನಟಿ ಶ್ವೇತಾ ಪ್ರಸಾದ್ ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶ್ವೇತಾ ಪ್ರಸಾದ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಫುಲ್ ಖುಷಿಯಾಗಿದ್ದಾರೆ. ತಮಗಾಗಿರುವ ಸಂತಸವನ್ನು ಶ್ವೇತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನನ್ನ ಬದುಕನ್ನು ಪ್ರೀತಿಸುತ್ತೇನೆ ಎಂದ ಶ್ವೇತಾ ಪ್ರಸಾದ್ - Shweta Prasad Instagram
ಕಿರುತೆರೆ ನಟಿ ಶ್ವೇತಾ ಪ್ರಸಾದ್, ಬದುಕಿನ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾ ತನಗೆ ತಾನೇ ಹ್ಯಾಪಿ ಬರ್ತ್ ಡೇ ಎಂದು ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಹುಟ್ಟುಹಬ್ಬದ ಫೋಟೋವನ್ನು ಇನ್ಸ್ಸ್ಟಾಗ್ರಾಂ ಹಂಚಿಕೊಂಡಿರುವ ಶ್ವೇತಾ, ತಮ್ಮ ಬದುಕನ್ನು ಪ್ರೀತಿಸುವುದಾಗಿ ಹೇಳಿದ್ದಾರೆ. 'ಪ್ರೀತಿಯ ನನ್ನನ್ನು ನಾನೇ ಪ್ರೀತಿಸುವುದಾಗಿ ಭರವಸೆ ನೀಡುತ್ತೇನೆ. ನಾನು ನನ್ನ ದೇಹ, ನನ್ನ ಆತ್ಮದ ಕುರಿತು ಕಾಳಜಿ ವಹಿಸುತ್ತೇನೆ. ನನ್ನನ್ನು ಸಂತೋಷ ಹಾಗೂ ಶಾಂತಿಯುತವಾಗಿರಿಸುತ್ತೇನೆ. ನಾನಿನ್ನೂ ಚಿಕ್ಕವಳು, ಸಾಧಿಸುವುದು ತುಂಬಾ ಇದೆ. ಆದರೆ, ನಾನು ಒತ್ತಡ ಹೇರಿಕೊಳ್ಳುವುದಿಲ್ಲ. ನನ್ನ ಬದುಕಿನ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ. ನಾನು ಭರವಸೆ ನೀಡುತ್ತೇನೆ, ನೀನು ಹೆಮ್ಮೆ ಪಡುವಂತೆ ಮಾಡುತ್ತೇನೆ. ನನಗೆ ಹ್ಯಾಪಿ ಬರ್ತ್ ಡೇ' ಎಂದಿದ್ದಾರೆ.