ಕರ್ನಾಟಕ

karnataka

ETV Bharat / sitara

ಇದೇ 28ಕ್ಕೆ ಟೆಲಿವಿಷನ್ ಕ್ರಿಕೆಟ್ ಲೀಗ್: ಕಿರುತೆರೆ ತಾರೆಯರ ಆಟ ನೋಡಲು ಮರೆಯದಿರಿ! - ಟೆಲಿವಿಷನ್ ಕ್ರಿಕೆಟ್ ಲೀಗ್

ಇದೇ ಡಿಸೆಂಬರ್ 28ರಂದು ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದೆ. ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿದ್ದು, ಕಿರುತರೆ ನಟ-ನಟಿಯರು ಭಾಗವಹಿಸಲಿದ್ದಾರೆ.

tcl cricket  on Dec 28 in Bangalore
ಟೆಲಿವಿಷನ್ ಕ್ರಿಕೆಟ್ ಲೀಗ್

By

Published : Dec 23, 2019, 5:38 PM IST

ಬೆಂಗಳೂರು: ಸಾಮಾಜಿಕ ಉದ್ದೇಶಕ್ಕಾಗಿ ವೋಟ್ ಮಾಡಿ ಡಾಟ್ ಇನ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ 28ರಂದು ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದೆ. ಟಿಸಿಎಲ್​​ನಲ್ಲಿ ಸ್ಪರ್ಧಿಸಲಿರುವ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ.

ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿದ್ದು, ಕಿರುತರೆ ನಟ-ನಟಿಯರು ಭಾಗವಹಿಸಲಿದ್ದಾರೆ.

ಕಿರುತೆರೆ ಕಲಾವಿದರೆಲ್ಲರೂ ಸೇರುವುದೇ ಒಂದು ಹಬ್ಬ. ಪಂದ್ಯ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ. ಕಿರುತೆರೆಯ ಮೇಲೆ ನಮ್ಮನ್ನು ನೋಡುವ ನೀವು ನೇರವಾಗಿ ಪಂದ್ಯಾವಳಿಗೆ ಬಂದು ಪ್ರೋತ್ಸಾಹಿಸಿ ಎಂದು ಮಾಸ್ಟರ್ ಆನಂದ್ ಕೇಳಿಕೊಂಡಿದ್ದಾರೆ.

ಆಯಾ ತಂಡದ ನಾಯಕರು ತಮ್ಮ ತಂಡದ ಸದಸ್ಯರೊಂದಿಗೆ ಸುಬ್ರಹ್ಮಣ್ಯಪುರದ ಎನ್.ಎಚ್. ಮೈದಾನದಲ್ಲಿ ಅಭ್ಯಾಸ ನಿರತರಾಗಿದ್ದಾರೆ.

ABOUT THE AUTHOR

...view details