ಕರ್ನಾಟಕ

karnataka

ETV Bharat / sitara

"ಕಪಟ ನಾಟಕ ಪಾತ್ರಧಾರಿ" ಪ್ರಚಾರಕ್ಕೆ ಬರದ ನಟ, ನಟಿ: ನೆರವಿಗೆ ಬಂದ ತರುಣ್ ಸುಧೀರ್..! - ತರುಣ್ ಸುಧೀರ್

ಕಪಟ ನಾಟಕ ಪಾತ್ರಧಾರಿ ಚಿತ್ರದ ಟ್ರೈಲರ್ ಲಾಂಚ್​​ಗೆ ಸಿನಿಮಾದ ನಾಯಕ ಬಾಲು ನಾಗೇಂದ್ರ ಹಾಗು ನಾಯಕ ನಟಿ ಸಂಗೀತ ಭಟ್ ಇಲ್ಲದೆ, ನಿರ್ದೇಶಕ ಕ್ರಿಷ್, ನಟಿ ಸೋನು ಗೌಡ, ಸಿಂಪಲ್ ಸುನಿ ಹಾಗೂ ತರುಣ್ ಸುಧೀರ್ ಸಹಕಾರದಿಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

"ಕಪಟ ನಾಟಕ ಪಾತ್ರಧಾರಿ"ಯ ನೆರವಿಗೆ ಬಂದ ತರುಣ್ ಸುಧೀರ್..!

By

Published : Sep 23, 2019, 5:13 PM IST

ಕಪಟ ನಾಟಕ ಪಾತ್ರಧಾರಿ ಸಿನಿಮಾ ಮಾಸ್ ಟೈಟಲ್​​ನಿಂದಲೇ ಸ್ಯಾಂಡಲ್​​ವುಡ್ ನಲ್ಲಿ ಸೌಂಡ್ ಮಾಡ್ತಿರೋ ಸಿನಿಮಾ. ಆದ್ರೆ ಈ ಸಿನಿಮಾ ಶುರುವಾದಾಗ ಹೀರೋ, ಹೀರೋಯಿನ್, ಡೈರೆಕ್ಟರ್ ಸಿಕ್ಕಾಪಟ್ಟೇ ಜೋಶ್ ನಲ್ಲಿದ್ರು. ಸಿನಿಮಾ ರಿಲೀಸ್ ಟೈಮ್ ಹೊತ್ತಿಗೆ, ಹೀರೋ, ಡೈರೆಕ್ಟರ್ ಹಾಗೂ ಹೀರೋಯಿನ್ ಸಿನಿಮಾ ಪ್ರಚಾರದಿಂದ ದೂರ ಉಳಿಯುತ್ತಾರೆ. ಈಗ ಇಂತಂಹದ್ದೇ ಪರಿಸ್ಥಿತಿ ಕಪಟ ನಾಟಕ ಪಾತ್ರಧಾರಿ ಸಿನಿಮಾಕ್ಕೆ ಎದುರಾಗಿದೆ.

ಹೌದು ಈ ಚಿತ್ರದ ಟ್ರೈಲರ್ ಲಾಂಚ್​​ಗೆ ಸಿನಿಮಾದ ನಾಯಕ ಬಾಲು ನಾಗೇಂದ್ರ ಹಾಗೂ ನಾಯಕ ನಟಿ ಸಂಗೀತ ಭಟ್ ಇಲ್ಲದೆ, ನಿರ್ದೇಶಕ ಕ್ರಿಷ್, ನಟಿ ಸೋನು ಗೌಡ, ಸಿಂಪಲ್ ಸುನಿ ಹಾಗೂ ತರುಣ್ ಸುಧೀರ್ ಸಹಕಾರದಿಂದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

"ಕಪಟ ನಾಟಕ ಪಾತ್ರಧಾರಿ"ಯ ನೆರವಿಗೆ ಬಂದ ತರುಣ್ ಸುಧೀರ್..!

ಟ್ರೈಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಬಾಲು ನಾಗೇಂದ್ರ ಪರ್ಸನಲ್ ಕೆಲಸದಿಂದ ಬರೋದಿಕ್ಕೆ ಆಗಿಲ್ವಂತೆ. ಇನ್ನು ಈ ಚಿತ್ರದ ನಾಯಕಿ ಸಂಗೀತ ಭಟ್ ಮೀ ಟೂ ಪ್ರಕರಣದಿಂದ ಚಿತ್ರಕ್ಕೆ ಗುಡ್ ಬೈ ಹೇಳಿ ಗಂಡನ ಜೊತೆ ಜರ್ಮನಿಯಲ್ಲಿ ಇದ್ದಾರಂತೆ.

ಆದ್ರೂ ಸಂಗೀತ ಭಟ್ ಅಲ್ಲಿಂದ ಒಂದು ವಿಡಿಯೋ ಮೂಲಕ ಚಿತ್ರ ತಂಡಗೆ ವಿಶ್ ಮಾಡಿದ್ದಾರೆ. ಹೀಗಾಗಿ ನಟಿ ಸೋನು ಗೌಡ, ನಿರ್ದೇಶಕರಾದ ಸಿಂಪಲ್ ಸುನಿ, ತರುಣ್ ಸುಧೀರ್ ಟ್ರೈಲರ್​ ರಿಲೀಸ್​​ ಕಾರ್ಯಕ್ರಮಕ್ಕೆ ಆಗಮಿಸಿ ಸಹಕಾರ ನೀಡಿದ್ರು.

ಕಾರ್ಯಕ್ರಮದಲ್ಲಿ ಮಾತನಾಡಿರುವ ತರುಣ್ ಸುಧೀರ್, ನಿಮ್ಮಲ್ಲಿ ಸಮಸ್ಯೆಗಳಿದ್ರೆ ಹೀರೋ, ಹೀರೋಯಿನ್ ಜೊತೆ ಮಾತನಾಡಿ ಬಗೆ ಹರಿಸಿಕೊಳ್ಳಿ. ಯಾಕೆಂದರೆ ನಿಮ್ಮ ಸಿನಿಮಾದ ಪ್ರಚಾರಕ್ಕೆ ಹೀರೋ, ಹೀರೋಯಿನ್ ಬಂದಿಲ್ಲ ಅಂದ್ರೆ ನಿಮ್ಮ ಸಿನಿಮಾಕ್ಕೆ ನಷ್ಟ ಅಂತಾ ಕಿವಿ ಮಾತು ಹೇಳಿದ್ರು.

ಸಿನಿಮಾದ ಮೊದಲಿಗೆ ಕಾಮಿಡಿ, ನಂತರ ಲವ್​​, ಆಮೇಲೆ ಹಾರಾರ್ ಇದ್ದು, ಸಿನಿಮಾ ಇಂಟ್ರಸ್ಟಿಂಗ್ ಎಲಿಮೆಂಟ್ಸ್ ಹೊಂದಿದೆ. ಈ ಚಿತ್ರದಲ್ಲಿ ಕಿರುತೆರೆ ನಟರಾದ ಶಂಕರ್ ನಾರಾಯಣ್, ಹಾಗು ಜೈ ದೇವ್ ನಟಿಸಿದ್ದಾರೆ. ಸದ್ಯ ಯುವ ನಿರ್ದೇಶಕ ಕ್ರಿಷ್ ಹಾಗು ಸಂಗೀತ ನಿರ್ದೇಶಕ ಆದಿಲ್ ನದಾಫ್ ತಮ್ಮ ಚಿತ್ರದ ವಿಶೇಷತೆ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ರು.

ABOUT THE AUTHOR

...view details