ಕರ್ನಾಟಕ

karnataka

ETV Bharat / sitara

ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್​ ಮಾಡಿದರೆ ಗತಿ ಏನು... ತರುಣ್​ ಸುಧೀರ್​ - Darshan starring Roberrt

ನಾವು 'ರಾಬರ್ಟ್' ಸಿನಿಮಾ ಬಿಡುಗಡೆ ಮಾಡಲು ರೆಡಿ ಇದ್ದೇವೆ. ಆದರೆ ಏನು ಪ್ರಯೋಜನ..? ಚಿತ್ರಮಂದಿರಗಳಲ್ಲಿ ಶೇ.50 ಸೀಟುಗಳಿಗೆ ಮಾತ್ರ ಅವಕಾಶವಿದೆ. ಈಗ ಸಿನಿಮಾ ಮಾಡಿದೆ ಗತಿ ಏನು ಎಂದು ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಆತಂಕ ವ್ಯಕ್ತಪಡಿಸಿದ್ದಾರೆ.

Tarun Sudhir
'ರಾಬರ್ಟ್' ಸಿನಿಮಾ

By

Published : Dec 23, 2020, 6:47 AM IST

ಕೊರೊನಾ ಸಮಸ್ಯೆಯಿಂದ ಬಿಗ್​ ಬಜೆಟ್ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆ ಮಾಡುವುದನ್ನು ಕೆಲವು ಸಮಯ ಮುಂದೂಡಿದ್ದರು. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಯಾವಾಗ ಬಿಡುಗಡೆಯಾಗುವುದೋ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಈಗ ದಚ್ಚು ಫ್ಯಾನ್ಸ್​​​ಗೆ ಮತ್ತೆ ನಿರಾಸೆ ಆಗಿದೆ.

ತರುಣ್ ಸುಧೀರ್, ದರ್ಶನ್, ಉಮಾಪತಿ

'ರಾಬರ್ಟ್' ಕ್ರಿಸ್​​ಮಸ್​​​ಗೆ ಬಿಡುಗಡೆಯಾಗಲಿದೆ ಎಂದು ಇದಕ್ಕೂ ಮುನ್ನ ಹೇಳಲಾಗಿತ್ತು. ನಂತರ 2021 ಸಂಕ್ರಾಂತಿ ಎನ್ನಲಾಯ್ತು. ಆದರೆ ಇದೀಗ ಈ ಸಿನಿಮಾ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. "ರಾಬರ್ಟ್ ಬಿಡುಗಡೆ ಏಕೆ ತಡವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ ತರುಣ್ ಸುಧೀರ್, ನಾವು ಸಿನಿಮಾ ಬಿಡುಗಡೆ ಮಾಡಲು ರೆಡಿ ಇದ್ದೇವೆ. ಆದರೆ ಈ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಅನುಮತಿ ನೀಡಲಾಗುತ್ತಿದೆ. ನಮ್ಮದು ಬಿಗ್ ಬಜೆಟ್​​​ ಚಿತ್ರ. ಇಂತಹ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಏನು ಗತಿ..?" ಎಂದು ಪ್ರಶ್ನಿಸುತ್ತಾರೆ ತರುಣ್.

ರಾಬರ್ಟ್ ಚಿತ್ರದಲ್ಲಿ ದರ್ಶನ್​

ಇದನ್ನೂ ಓದಿ:ಬಾಚ್ಯುಲರ್ಸ್‌‌ ಪಾರ್ಟಿಯಲ್ಲಿ ಮಿಂಚಿದ 'ಲವ್ ಮಾಕ್​​​​ಟೇಲ್'​​ ಜೋಡಿ

ಇನ್ನಷ್ಟು ದಿನಗಳು ಕಾದು ನೋಡುವುದಾಗಿ ಹೇಳುವ ತರುಣ್​, "ರಿಲೀಸ್​ ಡೇಟ್​ ಫಿಕ್ಸ್​ ಮಾಡಿದ ನಂತರ ಪ್ರಚಾರ ಶುರು ಮಾಡುವುದಾಗಿ ಹೇಳಿದ್ದಾರೆ. ಈಗಲೇ ಪ್ರಚಾರ ಕೆಲಸ ಶುರು ಮಾಡಿ ಏನು ಮಾಡುವುದು..? ಮೊದಲು ರಿಲೀಸ್​ ಡೇಟ್​ ಫಿಕ್ಸ್​ ಆಗಲಿ. ಆ ನಂತರ ಟೀಸರ್​, ಟ್ರೇಲರ್​, ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ. ಯಾವಾಗ ಬಿಡುಗಡೆ ಎಂಬ ಕ್ಲಾರಿಟಿ ಇಲ್ಲದೆ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ"ಎಂದಿದ್ದಾರೆ ​. ಆದರೆ ಇದರಿಂದ ನಿರಾಶೆ ಅನುಭವಿಸುತ್ತಿರುವುದು ಮಾತ್ರ ದರ್ಶನ್ ಅಭಿಮಾನಿಗಳು.

ABOUT THE AUTHOR

...view details