ಕರ್ನಾಟಕ

karnataka

ETV Bharat / sitara

ದಚ್ಚು ಮನೆಯಲ್ಲಿ ಕ್ರಿಯೇಟಿವ್​​​ ನಿರ್ದೇಶಕನ ಹುಟ್ದಬ್ಬ: ಹ್ಯಾಪಿ ಬರ್ತ್‌ಡೇ ತರುಣ್​ - ತರುಣ್​ ಸುಧೀರ್​​ ಹುಟ್ಟುಹಬ್ಬ

ನಟ ದರ್ಶನ್ ಸಮ್ಮುಖದಲ್ಲಿ ಸಂಗೀತ ನಿರ್ದೇಶಕ ತರುಣ್ ಸುಧೀರ್ ಕೇಕ್ ಕಟ್​​​​ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

tarun sudheer birthday
ದಚ್ಚು ಮನೆಯಲ್ಲಿ ಕ್ರಿಯೇಟಿವ್​​​ ನಿರ್ದೇಶಕನ ಹುಡ್ದಬ್ಬ : ಹ್ಯಾಪಿ ಬರ್ತ್​​ ಡೇ ತರುಣ್​​​

By

Published : Oct 9, 2020, 5:04 PM IST

'ಚೌಕ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಿರ್ದೇಶಕ ತರುಣ್ ಸುಧೀರ್ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳುತ್ತಿದ್ದಾರೆ. ಈ ನಿರ್ದೇಶಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಬರ್ತ್‌ಡೇ ಸಂಭ್ರಮದಲ್ಲಿ ಭಾಗೀಯಾದ ದರ್ಶನ್​​​, ತರುಣ್​​, ಉಮಾಪತಿ

ನಟ ದರ್ಶನ್ ಮನೆಯಲ್ಲಿ ತರುಣ್ ಸುಧೀರ್ ಕೇಕ್ ಕಟ್ ಮಾಡುವ ಮೂಲಕ ಬರ್ತ್‌ಡೇ ಸೆಲೆಬ್ರೆಟ್ ಮಾಡಿ ಕೊಂಡರು. ಈ ಸಂದರ್ಭದಲ್ಲಿ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಕೂಡ ಜೊತೆಗಿದ್ದರು.

ದರ್ಶನ್​​​, ತರುಣ್​​, ಉಮಾಪತಿ

'ರಾಬರ್ಟ್' ಸಿನಿಮಾ ರಿಲೀಸ್​​ಗೆ ರೆಡಿಯಾಗಿದ್ದು ಸೆನ್ಸಾರ್ ಮಾಡಿಸೋಕೆ ಚಿತ್ರತಂಡ ಪ್ಲಾನ್ ಮಾಡಿದೆ. ಜೊತೆಗೆ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ‌. ಈ ಚಿತ್ರದ ಬಳಿಕ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಸದ್ಯ ರಾಬರ್ಟ್ ಸಿನಿಮಾ ರಿಲೀಸ್ ಬಳಿಕ ಸಿಂಧೂರ ಲಕ್ಷ್ಮಣ ಸಿನಿಮಾ ಸೆಟ್ಟೇರಲಿದೆ‌.

ABOUT THE AUTHOR

...view details