ಕನ್ನಡ ಚಿತ್ರರಂಗದ ಕ್ರಿಯೇಟಿವ್ ಡೈರೆಕ್ಟರ್ ತರುಣ್ ಸುಧೀರ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಚೌಕ ಸಿನಿಮಾ ಮೂಲಕ ಸಕ್ಸಸ್‌ಫುಲ್ ನಿರ್ದೇಶಕ ಅಂತಾ ಕರೆಸಿಕೊಂಡ ತರುಣ್ ಸುಧೀರ್, ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.
ತರುಣ್ ಸುಧೀರ್‌ಗೆ ಇಂದು ಹುಟ್ಟು ಹಬ್ಬ.. ಇಂದು ಬರ್ತ್‌ಡೇ ಆಚರಿಸಿಕೊಂಡಿರುವ ತರುಣ್ ಸುಧೀರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ರನ್ನ ಭೇಟಿಯಾಗಿ ಸಂಭ್ರಮಿಸಿದ್ದಾರೆ. ಅಲ್ಲದೆ ಜೊತೆ ಜೊತೆಯಲಿ ಪ್ರೇಮ್ ಜೊತೆ ಕೇಕ್ ಕಟ್ ಮಾಡಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ತಮ್ಮ ಹುಟ್ಟು ಹಬ್ಬದ ದಿನ ತರುಣ್ ರಕ್ತ ದಾನ ಮಾಡಿ ಮಾದರಿಯಾಗಿದ್ದಾರೆ.
ರಕ್ತದಾನ ಮಾಡುತ್ತಿರುವ ನಿರ್ದೇಶಕ ತರುಣ್ ಸುಧೀರ್.. ಪ್ರೇಮ್ ಜೊತೆ ತರುಣ್ ಸುಧೀರ್ ಎರಡು ಸಿನಿಮಾಕ್ಕೆ ಟ್ಯಾಲೆಂಟೆಡ್ ನಿರ್ದೇಶಕ ಅಂತಾ ಪ್ರೂವ್ ಮಾಡಿದ್ದಾರೆ. ತರುಣ್ ಸುಧೀರ್ 1990ರಲ್ಲಿ ಅನಂತ್ ನಾಗ್ ಅಭಿನಯದ ಗಣೇಶನ ಮದುವೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗಿ ಇವತ್ತಿಗೂ ಸಿನಿ ಪ್ರಿಯರ ಮನಸ್ಸಿನಲ್ಲಿ ಉಳಿದಿರುವ ಸುಧೀರ್ ತಮ್ಮ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಬಂದ್ರೆ, ಒಳ್ಳೆ ಟೆಕ್ನಿಶಿಯನ್ ಆಗಬೇಕು ಅಂತಾ ಅಂದುಕೊಂಡಿದ್ರಂತೆ. ಅದರಂತೆ ನಂದ ಕಿಶೋರ್ ಹಾಗೂ ತರುಣ್ ಸುಧೀರ್ ನಿರ್ದೇಶಕರಾಗಿದ್ದಾರೆ. ರ್ಯಾಂಬೋ, ಅಧ್ಯಕ್ಷ,ರನ್ನ,ಗಜಕೇಸರಿ ಸಿನಿಮಾಗಳಿಗೆ ಕಥೆಗಾರನಾಗಿದ್ದ ತರುಣ್ ಸುಧೀರ್, ಚೌಕ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದರು.
ಇದಾದ ಬಳಿಕ ದರ್ಶನ್ ರಾಬರ್ಟ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ತರುಣ್ ಸುಧೀರ್ ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆ ಸಿನಿಮಾಗಳನ್ನ ಮಾಡಲಿ ಅನ್ನೋದು ಅಭಿಮಾನಿಗಳ ಆಶಯ.
"ರಾಬರ್ಟ್" ಸಿನಿಮಾ ನಿರ್ದೇಶಕ ತರುಣ್ ಸುಧೀರ್‌ಗೆ ಹುಟ್ಟು ಹಬ್ಬ ಸಂಭ್ರಮ..