ಬಾಲಿವುಡ್ನಲ್ಲಿ ಇತ್ತೀಚೆಗೆ ಐತಿಹಾಸಿಕ ಸಿನಿಮಾಗಳ ಭರಾಟೆ ಬಲು ಜೋರಾಗಿದೆ. ಹಲವು ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದರೆ ಇನ್ನು ಕೆಲವು ಸಿನಿಮಾಗಳು ಟ್ರೇಲರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುತ್ತಿವೆ. ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಸಿನಿಮಾದ ಟ್ರೇಲರ್ ಹೆಚ್ಚು ಸದ್ದು ಮಾಡಿತ್ತು. ಅಲ್ಲದೆ ಕಳಂಕ್, ಮಣಿಕರ್ಣಿಕ, ಸೈರಾ ಹಾಗೂ ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಿದ ಪಾಣಿಪತ್ ಸಿನಿಮಾಗಳು ಬಾಲಿವುಡ್ ಸಿನಿ ರಂಗದಲ್ಲಿ ಸುದ್ದಿಯಲ್ಲಿವೆ. ಇದೀಗ ಈ ಸಾಲಿನಲ್ಲಿ ನಿಲ್ಲಲು ಅಜಯ್ ದೇವಗನ್ ಅಭಿನಯದ 'ತನ್ಹಾಜಿ' ಸಿನಿಮಾ ಇದೆ.
ಮರಾಠ ಸೇನಾನಿಯಾದ ತನ್ಹಾಜಿ ಜೀವನಾಧಾರಿತ ಸಿನಿಮಾ ಇದಾಗಿದ್ದು, ತನ್ಹಾಜಿ ಪಾತ್ರದಲ್ಲಿ ಅಜಯ್ ದೇವಗನ್ ಮಿಂಚಿದ್ದಾರೆ. ಈ ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದ್ದು, ಅಜಯ್ ಕೇಸರಿ ತಿಲಕ ಇಟ್ಟು, ಉಗ್ರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.