ಕನ್ನಡ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡ್ತಾ ಮಾಡ್ತಾ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆದ ನಟ ನವರಸ ನಾಯಕ ಜಗ್ಗೇಶ್. ನಟನೆ, ನಿರ್ದೇಶನ, ಗಾಯನದಲ್ಲಿ ತೊಡಗಿಸಿಕೊಂಡಿದ್ದ ಅವರು ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ ನಾಲ್ಕು ದಶಕಗಳನ್ನ ಪೂರೈಸಿದ್ದಾರೆ.
ಇವತ್ತಿಗೂ ಬೇಡಿಕೆ ನಟನಾಗಿರೋ ಜಗ್ಗೇಶ್ ಕಾಮಿಡಿಗೆ, ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಅಭಿಮಾನಿಗಳಿದ್ದಾರೆ. ಹೌದು ಆಸ್ತಿ, ಅಂತಸ್ತು, ಹುದ್ದೆ ಎಂಬ ಅಹಂ ಇಲ್ಲದೆ ಸಕಲ ವರ್ಗಗಳಲ್ಲಿ ಜಗ್ಗೇಶ್‌ಗೆ ತನ್ನದೇ ಆದ ಅಭಿಮಾನಿ ವರ್ಗವಿದೆ. ಇದಕ್ಕೆ ತಾಜಾ ಉದಾಹರಣೆ ತಮಿಳುನಾಡಿನ ಐಎಎಸ್ ಅಧಿಕಾರಿಯೊಬ್ಬರು ಜಗ್ಗೇಶ್ ಬಗ್ಗೆ ಗುಣಗಾನ ಮಾಡಿದ್ದಾರೆ.