ನಂದ ಕಿಶೋರ್ ಆಕ್ಷನ್ ಕಟ್ ಹೇಳಿರುವ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಹವಾ ಜೋರಾಗಿ ಇರುವುದು ಗೊತ್ತಿರುವ ವಿಚಾರ. ಇದು ಕನ್ನಡ ಮಾತ್ರವಲ್ಲ ಪರಭಾಷೆಗಳಲ್ಲೂ ಕೂಡ ಇದೆ. ಅದ್ರಲ್ಲೂ ಈ ಚಿತ್ರದ ಖರಾಬು ಹಾಡಂತೂ ಇದೀಗ ಎಲ್ಲೆಲ್ಲೂ ಟ್ರೆಂಡ್ ಆಗಿದ್ದು, ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದೆ.
ಕನ್ನಡ ಭಾಷೆನೇ ಗೊತ್ತಿಲ್ಲದ ತಮಿಳು ಅಭಿಮಾನಿಯೊಬ್ಬ ಖರಾಬು ಹಾಡಿನ ಬಗ್ಗೆ ಸಖತ್ ಕಮೆಂಟ್ ಮಾಡಿದ ಖುಷಿ ಒಟ್ಟಿದ್ದಾರೆ. ನಮ್ಮ ಮನೆಯಲ್ಲಿ ಮಕ್ಕಳು ಕಾಫಿ ಕುಡಿಯುವುದಕ್ಕಿಂತ ಮುಂಚೆಯೇ ಈ ಹಾಡನ್ನು ಕೇಳ್ತಾರೆ. ಜ್ವರ ಬಂದಿದ್ರೂ ಕೂಡ ಈ ಹಾಡು ಕೇಳಿ ಕುಣಿಯಬೇಕು ಅನಿಸುತ್ತೆ.