ಸುಬ್ರಹ್ಮಣ್ಯ :ತಮಿಳಿನ ಪ್ರಖ್ಯಾತ ನಿರ್ದೇಶಕ ಅಟ್ಲೀ ಎಂದು ಪ್ರಸಿದ್ಧರಾದ ಅರುಣ್ ಕುಮಾರ್ ದಂಪತಿಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತಮಿಳಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಅಟ್ಲೀ ಎಂದೇ ಪ್ರಖ್ಯಾತರಾಗಿರುವ ಅರುಣ್ ಅವರು, 2013ರಲ್ಲಿ ತಮಿಳು ಚಿತ್ರರಂಗದ ದಳಪತಿ ವಿಜಯ್ ಅಭಿನಯದ ಹಿಟ್ ಸಿನಿಮಾ ಬಿಗಿಲ್ ಚಿತ್ರ ನಿರ್ದೇಶಿಸಿದ್ದರು.
ನಿರ್ದೇಶಕ ಅಟ್ಲೀ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಅರುಣ್ ಕುಮಾರ್ ಅವರು ಸಹನಿರ್ದೇಶಕನಾಗಿ ವಿಕ್ರಮ್ ಅಭಿನಯದ ಎಂದಿರನ್, ನಂತರ ವಿಜಯ್ ಅಭಿನಯದ ಸಾಲು ಸಾಲು ಹಿಟ್ ಚಿತ್ರಗಳಾದ ತೇರಿ, ಮಾರ್ಷಲ್ ಹಾಗೂ ಬಿಗಿಲ್ ಚಿತ್ರಗಳನ್ನು ನಿರ್ದೇಶಿಸಿದರು. ಪತ್ನಿ ಕೃಷ್ಣ ಪ್ರಿಯಾ ಜೊತೆಗೆ ಆಗಮಿಸಿ ಪೂಜೆ ಸಲ್ಲಿಸಿದ ಅರುಣ್ ಕುಮಾರ್, ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದರು.
ನಂತರ ದೇವಳದ ವತಿಯಿಂದ ನಡೆಯುತ್ತಿರುವ ಅನ್ನದಾನ ನಿಧಿಗೆ 10 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಅವರು ಹಸ್ತಾಂತರಿಸಿದರು. ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಅನ್ನದಾನಕ್ಕೆ 10 ಲಕ್ಷ ರೂ. ಹಸ್ತಾಂತರ