ತಮಿಳು ಬಿಗ್ಬಾಸ್ 3ನೇ ಸೀಸನ್ ಸ್ಪರ್ಧಿಯಾಗಿದ್ದ ನಟಿ ಮಧುಮಿತಾ ಕಳೆದ ವಾರ ಮನೆಯಿಂದ ಹೊರಹಾಕಲ್ಪಟ್ಟಿದ್ದರು. ಕೆಲವು ಕಾರಣಗಳಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಈ ಸ್ಪರ್ಧಿಯನ್ನು ಬಿಗ್ಬಾಸ್ ಟೀಂ ಕಿಕ್ ಔಟ್ ಮಾಡಿತ್ತು. ಇದೀಗ ಅವರು ಬಾಕಿ ಇರುವ ತನ್ನ ಸಂಭಾವನೆ ಪಾವತಿಸುವಂತೆ ಬಿಗ್ಬಾಸ್ಗೆ ಕೇಳಿಕೊಂಡಿದ್ದಾರೆ.
ದಯವಿಟ್ಟು ನನಗೆ ಪೇಮೆಂಟ್ ಕೊಡಿ, ಸಂಭಾವನೆಗೆ ಬಿಗ್ಬಾಸ್ ಮಧುಮಿತಾ ಒತ್ತಾಯ - ಸ್ಪರ್ಧಿ ಮಧುಮಿತಾ
ಆತ್ಮಹತ್ಯೆಗೆ ಯತ್ನಿಸಿ ಬಿಗ್ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡಿರುವ ಸ್ಪರ್ಧಿ ಮಧುಮಿತಾ, ಈಗ ತನ್ನ ಪೇಮೆಂಟ್ ನೀಡುವಂತೆ ಒತ್ತಾಯಿಸಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ 42 ದಿನಗಳ ಕಾಲ ತಂಗಿದ್ದ ಮಧುಮಿತಾ ಈಗಾಗಲೇ ₹ 11,42,000 ಪಡೆದುಕೊಂಡಿದ್ದಾರಂತೆ. ಬಾಕಿ ಉಳಿದಿರುವ ಹಣವನ್ನು ನೀಡಿ ಎಂದು ಬಿಗ್ಬಾಸ್ ಶೋ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಹಿನಿ, ಮಧುಮಿತಾ ಸಂಭಾವನೆ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದೆ. ಆದರೆ, ಇದನ್ನು ಅಲ್ಲಗಳೆದಿರುವ ಮಧುಮಿತಾ, ನಾನು ಕೇವಲ ಸಂಭಾವನೆ ಅಷ್ಟೆ ಕೇಳುತ್ತಿದ್ದೇನೆ ಎಂದಿದ್ದಾರೆ. ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿಕೊಳ್ಳುವಂತೆ ಬಿಗ್ಬಾಸ್ ನಿರೂಪಕ ಕಮಲ್ ಹಾಸನ್ ಅವರಿಗೂ ಕೇಳಿಕೊಂಡಿದ್ದಾರೆ ಮಧುಮಿತಾ.