ತೆಲುಗಿನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ತಮಿಳಿಗೆ ರೀಮೇಕ್ ಮಾಡಲು ಆರಂಭಿಸಿ ಬಹಳ ದಿನಗಳು ಕಳೆದವು. ಕೆಲವೊಂದು ಅಡೆತಡೆಗಳ ನಡುವೆಯೂ ಇದೀಗ ಶೂಟಿಂಗ್ ಮುಗಿಯುವ ಹಂತದಲ್ಲಿದೆ.
ತಮಿಳು 'ಅರ್ಜುನ್ ರೆಡ್ಡಿ' ಶೂಟಿಂಗ್ ಬಹುತೇಕ ಪೂರ್ಣ - undefined
ವಿಕ್ರಮ್ ಪುತ್ರ ಧ್ರುವ್ ವಿಕ್ರಮ್ ನಾಯಕನಾಗಿ ನಟಿಸುತ್ತಿರುವ 'ಅರ್ಜುನ್ ರೆಡ್ಡಿ' ರೀಮೇಕ್ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು, ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿದೆ. ಈ ಮೊದಲು ಬಾಲಾ ನಿರ್ದೇಶಿಸಿದ್ದ ವರ್ಷನ್ ಬದಲಿಸಿ ಇಡೀ ಸಿನಿಮಾವನ್ನು ಮೊದಲಿನಿಂದ ಶೂಟ್ ಮಾಡಲಾಗಿದೆ.
ತಮಿಳು ನಟ ವಿಕ್ರಮ್ ಪುತ್ರ ಧ್ರುವ್ ವಿಕ್ರಮ್ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪಾತ್ರ ಮಾಡುತ್ತಿದ್ದಾರೆ. ಸಿನಿಮಾಗೆ 'ಆದಿತ್ಯ ವರ್ಮ' ಎಂದು ಹೆಸರಿಟ್ಟಿದ್ದು, ಕೆಲವೊಂದು ದೃಶ್ಯ ಹಾಗೂ ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ಜೂನ್ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ಸಿನಿಮಾ ರೀಲೀಸ್ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. E4 ಎಂಟರ್ಟೈನ್ಮೆಂಟ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
ಈ ಮುನ್ನ ಸಿನಿಮಾವನ್ನು ಬಾಲಾ ನಿರ್ದೇಶಿಸಿದ್ದು, ಚಿತ್ರದ ಔಟ್ಪುಟ್ ನಿರ್ಮಾಪಕರಿಗೆ ಹಿಡಿಸದ ಕಾರಣ ಇಡೀ ತಂಡವನ್ನು ಬದಲಿಸಿ ಸಿನಿಮಾವನ್ನು ಮೊದಲಿನಿಂದ ಶೂಟ್ ಮಾಡಲಾಗಿದೆ. ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾಗೆ ಸಹನಿರ್ದೇಶನಾಗಿ ಕೆಲಸ ಮಾಡಿದ್ದ ಗಿರೀಶಯ್ಯ ಇದೀಗ 'ಆದಿತ್ಯ ವರ್ಮ'ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಾಲಿವುಡ್ ನಟಿ ಬನಿತಾ ಸಂಧು ಹಾಗೂ ಪ್ರಿಯಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.